Monday 16 April 2012


ಜೀವನ ಪಯಣ

ಬಾಲ್ಯದಲಿ ಹೇಳಿದರು ಇವಳು ನಿನ್ನವಳು 
ನಿನ್ನವಳಾಗುವ ಆ ಕಾಲ ಬಂದಾಗ
ಎದ್ದಿತೊಂದು ತುಫಾನು ಬದುಕಲ್ಲಿ
ಅದರ ಹೊಡೆತಕೆ ಸಿಲುಕಿ ನಾನೆಲ್ಲೋ ನೀನೆಲ್ಲೋ

ಎದುರಿಸಲು ಧೈರ್ಯ ವಿಲ್ಲವಾಯ್ತು
ಮನದ ಮಾತು ಮೌನಕ್ಕೆ ಶರಣಾಯ್ತು
ದಾರಿಕಾಣದೆ ಹತ್ತಿದೆ ಹಿರಿಯರು ತೋರಿದ ನೌಕೆಯನು
ಹೊತ್ತು ಮನದತುಂಬ ನಿನ್ನ ನೆನಪನ್ನು

ನಿನ್ನ ನೆನಪುಗಳ ಮೂಟೆಗೆ ಬೀಗ ಜಡಿದೆ
ಹೊಸಬದುಕಿಗೆ ನಾ ನಾಂದಿ ಹಾಡಿದೆ
ದಿನಗಳುರುಳುತಿವೆ ಸಂತಸದಲಿ
ಒಮ್ಮೊಮ್ಮೆ ನಿಲ್ಲುವದು ಮನ ಬೀಗಜಡಿದ ಮೂಟೆಯಲಿ

ನನಗಾಗಿ ಕಾದು ಕಾದು ನಿನಗಾಯ್ತು ಬೇಸರ
ನೀರಾಸೆ ವೈರಾಗ್ಯ ತುಂಬಿಕೊಳ್ಳುವಲ್ಲಿ ನೀ ಮಾಡಿದೆ ಅವಸರ
ಅಂತೂ ನಿನ್ನ ಬದುಕಲ್ಲೂ ಬಂತೊಂದು ದಿನ ಶ್ರಾವಣ
ಅರಿವಾಗಿರಬೇಕು ಬದುಕು ಸುಖದುಃಖದ ಹೂರಣ  

ಬದುಕಬೇಕೆಂದುಕೊಂಡೆ ಎಲೆಮೇಲೆ ನೀರು ಜಾರುವಂತೆ
ಅಂಟಿಸಿಕೊಳ್ಳದೆ ನೆನಪುಗಳ  ಈ ಮನಕೆ
ಆದರೂ  ಒಮ್ಮೊಮ್ಮೆ ಆಗುವದು ಮನ ಹತ್ತಿಯಂತೆ
ನೀರನ್ನ ಹೀರಿ ಮುದ್ದೆ ಆಗುವಂತೆ

ಬದುಕೆಂಬುದು ವಿಧಿಸಾಹೇಬನ ಜಟಕಾಬಂಡಿ
ಅದು ಹೋಗದೆಂದು ನಾವು ತೋರಿದ ದಾರಿಯಲಿ
ನಾವೇ ತೂರಿಕೊಳಬೇಕು ಅದು ಕೊಂಡೊಯ್ದ ದಿಕ್ಕಿನಲ್ಲಿ
ನೆಮ್ಮದಿಯ ಬದುಕು ನಮದಾಗುವದು ಬಾಳೆಂಬ ಆಟದಲಿ

No comments:

Post a Comment