Tuesday 19 June 2012


ಪಯಣ
ಕಾಣದೂರಿಗೆ ನಮ್ಮ ಪಯಣ
ದಣಿವಾರಿಸಲು ಮಧ್ಯದಲಿದು
ತಂಗುದಾಣ
ಇಲ್ಲಿ ಕೊಟ್ಟು ಕೊಳ್ಳಬೇಕು ಪ್ರೀತಿ
ಪ್ರೇಮ ಮಮತೆ
ಬದಲು ಕೊಳ್ಳುವೆವು ಕೋಪ
ದ್ವೇಷ ಅಸೂಯೆ
ಕಚ್ಚಾಡುವೆವು ನಮ್ಮದಲ್ಲದ
ವಸ್ತುವಿಗಾಗಿ
ಕೊನೆಗೆ ಹೊತ್ತಯ್ಯಲಾಗದೆ
ಬಿಟ್ಟೋಗಲಾಗದೆ ಅನುಭವಿಸುವೆವು
ತ್ರಿಶಂಕುವಿನ ಪಾಡು
ಕೊಳ್ಳಬೇಕಾದುದನೆ ಕೊಂಡರೆ
ಪಯಣವದು ಸುಖವು
ಕರೆದಾಗ ಹೋಗಲು ನಮಗಿಲ್ಲ ಭಯವು
ಶಾಶ್ವತವಲ್ಲವೀ ತಂಗುದಾಣ
ಸರತಿ ಬಂದಾಗ ಮುಂದುವರಿಸಬೇಕು
ನಮ್ಮ ಪಯಣ 

Thursday 7 June 2012


ಕುರುಡು
ನಾನು ಪುಟ್ಟ ಮಗು ಕುರುಡಿ
ಬದುಕ ಬಂಡಿ ಎಳೆಯುತಿಹೆ ಭಿಕ್ಷೆ ಬೇಡಿ
ನಾ ನಿಲ್ಲುವದು ಆ ಶಾಲೆಯ ಇದಿರು
ಯಾಕಂದರೆ ಮಕ್ಕಳು ದಿನಾಲು ಅಲ್ಲಿ ಆಡುವರು
ನಾ ಕೇಳುವೆ ಮಕ್ಕಳಾ ಆಟದ ಸದ್ದು
ನನಗೂ ಅಡುವ ಬಯಕೆ ಮೂಡುವದು
ನಾನು ಕುರುಡಿ ನನಗೆಲ್ಲಿಯ ಶಾಲೆ
ಕಣ್ಣೀರೊರೆಸಲೂ ಯಾರಿಲ್ಲದೆ ಬೆಳೆದ ಬಾಲೆ
ಮಕ್ಕಳ ಕರೆದೊಯ್ಯಲು ಬರುವರು ಅಪ್ಪ ಅಮ್ಮ
ನಾ ಇಲ್ಲಿ ಹೆತ್ತವರಿಗೂ ಬೇಡದ ಒಂಟಿ ಗುಮ್ಮ
ನನಗೆ ಗೊತ್ತು ಮಕ್ಕಳಿಗೆ ನನ್ನೊಡನೆ ಆಟ ಆಡಲು ಆಸೆ
ಅವರಿಲ್ಲಿ ಬಂದು ನೋಡಿದರೆ ನಾ ಕುರುಡಿ ಮತ್ತದೆ ನಿರಾಸೆ
ಮೂಡುವದು ನನ್ನಲ್ಲಿ ಸಾವಿನ ಬಯಕೆ
ಇದರಿಂದ ಶಾಂತಿ ಸಿಗಬಹುದೇನೋ ಮನಕೆ
ಸ್ವರ್ಗದಲ್ಲಾದರೆ ನನ್ನಂತವರಿಗೆ ಕಣ್ಣು ಸಿಗುವದಂತೆ
ನನ್ನ ಕೂಗ ಕೇಳಿಸಿ ಕೊಳ್ಳಲು ಆ ದೇವನಿರುವನಂತೆ