Wednesday 4 April 2012


ನನ್ನ ಮುದ್ದಿನ  ನಾಯಿಗಳು

ಕುಬ್ಜ ದೇಹದ, ಸೊಟ್ಟ ಬಾಲದ, ಕಪ್ಪು ಬಣ್ಣದ ನಾಯಿ
ಇದರ ಹೆಸರು ರೂಬಿ
ಪಕ್ಕದಲ್ಲಿ ನಿಂತಿರುವಳು ಸಕಿ  ಕೆಂಪು ಬಣ್ಣದಲಿ
ಇದರ ಹೆಸರು  ಪಿಲ್ಲಿ

ಜಯ ವಿಜಯಯರಂತೆ  ನಿಲ್ಲುವರು ಬಾಗಿಲಲ್ಲಿ
ಬಂದವರು ಮುಂದಡಿಯಿಡಲಾರದೆ ನಿಲ್ಲಲೇ ಬೇಕು ಅಲ್ಲಿ
ಒಳ ಬರಬೇಕೆಂದರೆ ಬೇಕು ಇವರ ಅಪ್ಪಣೆ
ಒಡೆಯನ ಸೇವೆಯಲಿ ಮರೆಯುವದು ಕಷ್ಟಕಾರ್ಪಣೆ

ಮಾಡುವುದು ಒಮ್ಮೊಮ್ಮೆ ತುಂತಾಟದ ಅತಿರೇಕ
ನೋಡಿದವರಿಗನಿಸುವುದು ಇವು  ಅಮಾಯಕ
ಇವಕೆ ಬಯ್ದರೆ ಸಾಕು ಮಾದುವವು ಉಪವಾಸ
ತಿಂಡಿ ತಿನಿಸಲು ಮಾಡ ಬೇಕು ನಾವು ಹರ ಸಾಹಸ

ಇವಕೂ ಅಂಟಿದೆ ಕಾರಲ್ಲಿ ತಿರುಗುವ ಗೀಳು
ಬಿಟ್ಟು ಹೋದರೆ ಸಾಕು ದಿನವೆಲ್ಲ ಅಳುವಿನ ಗೋಳು
ಮುದ್ದು ಮಾಡಿದರೆ ಸಾಕು ಮೈಯನ್ನು ತಿಕ್ಕಿ
ಬಾಲ ಆಡಿಸಿ ತೋರಿಸಿರುವವು ಪ್ರೀತಿಯನು ಕಾಲು ನೆಕ್ಕಿ

ಜಂಪ್ ಅಂದರೆ  ಹಾರುವವು,
ಔಟ್ ಅಂದರೆ ಹೊರಗೆ ಓಡುವವು
ಎಟಾಕ್ ಅಂದರೆ ಮುನ್ನುಗ್ಗುವವು
ಇವಕೂ  ಆಂಗ್ಲ ಭಾಷೆಯ ಮೋಹವು

ದಿನ ಕಳೆಯುವವು ಮನೆ ಕಾಯುವ ಕೆಲಸದಲಿ 
ಸಹಾಯಕ್ಕೆ ಬರುವವು  ಇವೇ ಅಪಾಯದಲಿ
ನಿಸಂಶಯದಿ ನಂಬುವವು ಒಡೆಯನೇ ಸರ್ವಸ್ವೆಂದು
ಅದಕ್ಕೆಂದೇ ಹೇಳುವರು ನಂಬಿಕೆಗೆ ಪರ್ಯಾಯ ನಾಯಿಯೆಂದು  

No comments:

Post a Comment