Sunday 1 April 2012

ಹಕ್ಕಿಮರಿ

ಬರುವಾಗ ದಾರಿಯಲಿ ಬಿದ್ದಿತ್ತೊಂದು ಹಕ್ಕಿಮರಿ
ಒದ್ದಾಡುತ್ತಿತ್ತು ತನ್ನ ರಕ್ಷಣೆಗಾಗಿ ಪರಿಪರಿ
ಅಚಾನಕ್ಕಾಗಿ ಕಂಡಿತದು ನನ್ನ ಕಣ್ಣಿಗೆ
ಎತ್ತಿ ತಂದೆನು ಮೆಲ್ಲಗೆ ನಮ್ಮಮನೆಗೆ
ನೋಡಿದರೆ ಕಾಲು ಮುರಿದಿತ್ತು
ಕೆಂಪಿರುವೆ ಕಡಿದಿತ್ತು
ಕೂಗುತಿತ್ತು ಆಗಾಗ ಅದರ ವೇದನೆಗಾಗಿ
ಕಾಲಮೇಲೆ ಕುಳಿಸಿಕೊಂಡರೆ ಇರುತ್ತಿತ್ತು ಸುಮ್ಮನಾಗಿ
ನನಗೆ ತಿಳಿದಿಲ್ಲ ಕೊಡುವದಹಾರ ಹೇಗದಕೆ
ಅದು ಚಿಕ್ಕದು ಬರುತ್ತಿರಲಿಲ್ಲ ಆಹಾರ ಹೆಕ್ಕಿ ತಿನ್ನುವದಕೆ
ಅಂತು ಇಂತೂ ಕಷ್ಟದಲಿ ಕಳೆಯಿತೆರಡು ದಿನ
ತಿಂದು ಬದುಕಿತು ಪಾಪ ಅನ್ನದಗಳನ್ನ
ಮೂರನೇ ದಿನ ಏನಾಯಿತೋ ಗೊತ್ತಿಲ್ಲ
ಕರೆದರೆ ಅದರ ಕೂಗಿನ ಸದ್ದೇ ಇರಲಿಲ್ಲ
ಹತ್ತಿರ ಹೋಗಿ ನೋಡಿದರೆ ಸುಮ್ಮನೆ ಕುಳಿತಿತ್ತು
ಊಟ ಕೊಟ್ಟರೆ ತಿನ್ನದೇ ಮುಷ್ಕರ ಮಾಡಿತ್ತು
ಎಂದಿನಂತೆ ತೆವಳಿಕೊಂಡು ಕಾಲಹತ್ತಿ ಕುಳಿತ್ತಿತ್ತು
ನೋಡನೋಡುತ್ತಲೇ ಅದರ ಪ್ರಾಣಪಕ್ಷಿ ಹಾರಿತ್ತು
ಅಯ್ಯೋ ಇದಾವ ಜನ್ಮದ ಋಣವೋ
ನಮ್ಮ ಮನೆಗೆ ಬರಲದಾವ ಕಾರಣವೋ
ಉಳಿದಿತ್ತದಾವ ತೀರದ ಬಾಕಿ
ದೇವರ ಮುಂದೆ ಕುಳಿತೆ ಕಣ್ಣೀರ ಹಾಕಿ   







No comments:

Post a Comment