Tuesday, 28 April 2015

ಗೋ ಮಾತೆಗೂ ಹೋಟೆಲ್ ಶೋಕಿ....
ಭಾನುವಾರ ಹೆಚ್ಚಿನವರ ಮನೆಯಲ್ಲಿ ಬೆಳಗಾಗೋದು ತಡವಾಗೇ ಅಲ್ವಾ...ಹಾಗೆ ನಮ್ಮಲ್ಲೂ ಆವತ್ತು ಸೂರ್ಯ ತಡವಾಗೇ ಬಂದಿದ್ದ.....ಲೇಟ್ ಆದಾಗ ತಿಂಡಿ ಮಾಡೋಕು ಬೇಜಾರು...ಇವತ್ತು ತಿಂಡಿಯನ್ನ ಹೋಟೆಲ್ಇಂದ ತರೋಣ ಅಂತ ಹೋದ್ವಿ.....ಅದೊಂದು ಪುಟ್ಟ ಹೋಟೆಲ್..ಕ್ಲೀನ್ ಆಗಿ ಚನ್ನಾಗಿದೆ....ನಾವು ಯಾವಾಗಲೂ ಮನೆಗೆ ಪಾರ್ಸೆಲ್ ತರೋದು....ಅದ್ಕೆ ಅಲ್ಲಿ ಆರ್ಡರ್ ಕೊಟ್ಟು ನಿಂತಿದ್ವಿ.....ತುಂಬಾ ಜನರೆಲ್ಲಾ ಕೂತಿದ್ರು...ಆಗ ಒಮ್ಮೆಲೆ ಒಂದು ದೊಡ್ಡ ಬಿಳಿ ಬಣ್ಣದ ಜರ್ಸಿ ಹಸು ಹೋಟೆಲ್ ಒಳಕ್ಕೆ ಬಂದು cash ಕೌಂಟರ್ ಹತ್ರ ಬಂದು ನಿಂತಿತು .....ಆಗ ಹೋಟೆಲ್ ಮಾಲೀಕ ಅಯ್ಯೋ ಒಳಕ್ಕೆ ಯಾಕೆ ಬಂದೆ ಹೋಗು ಹೊರಕ್ಕೆ ಅಂದ್ರೆ ಅವನ ಮಾತು ಅರ್ಥ ಆದವರ ಹಾಗೆ ಇಲ್ಲ ಅನ್ನೋ ತರ ತಲೆ ಅಲ್ಲಾಡಿಸಿತು.....ಅವನು ಆಯ್ತು..ಆಯ್ತು ಮಾರಾಯ್ತಿ ಅಂತ ಹೇಳಿ ಕೆಲಸದ ಹುಡುಗರಿಗೆ ಬೇಗ ತಂದ್ರೋ ಲೇಟ್ ಆಯ್ತು ಅಂತ ಒಳಕ್ಕೆ ಬಂದಿದ್ದಾಳೆ ಅಂದ....ನಾವು ಇವನು ಏನು ಹೇಳ್ತಾನೆ ಅಂತ ನೋಡ್ತಾನೆ ಇದ್ವಿ....ಆಗ ಹುಡುಗ ಎರಡು ದೋಸೆ ಹಿಡಿದು ಬಾ ಅಂತ ಹೊರಕ್ಕೆ ಕರೆದ ಆಗ ಅದು ಹೊರಕ್ಕೆ ಹೋಗಿ ಆ ದೋಸೆ ತಿಂದು ಹೊರಟೋಯ್ತು.....ಆಗ ಹೇಳಿದ ಈ ಹಸು ಕರು ಇದ್ದಾಗಿಂದ ನಮ್ಮ ಹೋಟೆಲ್ಗೆ ಬಂದು ದೋಸೆ ತಿಂದು ಹೋಗೋದು ಅಂತ....ಕೇಳಿ ಆಶ್ಚರ್ಯ ಆಯ್ತು....ಮೂಕ ಪ್ರಾಣಿಗಳು ಹೇಗೆ ವರ್ತಿಸುತ್ತವೆ ಅಂತ...All living being become slaves to rutine and habit ಅಲ್ವಾ....ನೋಡಿ ಪ್ರೀತಿ ಅನ್ನೋದು ಹೇಗೆ ಎಲ್ಲ ಜೀವಿಗಳಲ್ಲೂ ಒಂದು ಹಕ್ಕನ್ನ ತಂದು ಬಿಡುತ್ತವೆ...ಹಾಗೆ ಅಂತ ಇದೇನು ಕೆಟ್ಟ ಹಕ್ಕಲ್ಲ....ಎರಡು ದಿನ ಅವಜ್ಞೆ ತೋರಿಸಿದರೆ ಕರಗಿ ಹೋಗುತ್ತೆ....ಆದರೆ ಪ್ರೀತಿನೆ ಹಾಗೆ....ಪ್ರೀತಿಸಿದವರಿಂದ ಸಣ್ಣ ಪ್ರತಿಕ್ರಿಯೆಯನ್ನಾದರೂ ನಿರೀಕ್ಷೆ ಮಾಡ್ತಾನೆ ಇರುತ್ತೆ.....ನೀವು ಅದನ್ನೆಲ್ಲ ಉದಾಸೀನ ಮಾಡ್ತಾ ಹೋದರೆ ಅಲ್ಲೊಂದು ದಿನ ಪ್ರೀತಿನೂ ಇರಲ್ಲ...ಪ್ರೀತಿಸೋರು ಇರಲ್ಲ......ಅದ್ಕೆ ಇರಬೇಕು ಪ್ರೀತಿ ಅನ್ನೋದು ಒಂದು ಜವಾಬ್ಧಾರಿ...ಒಂದು ಕಮಿಟ್ಮೆಂಟ್ ಅನ್ನೋದು.....

Friday, 24 April 2015


ಕುಬೇರಜ್ಜ ತೋರಿದ ಪ್ರೀತಿ....

ನಾನು ಡಿಗ್ರೀ ಮುಗಿಸಿ ಬೆಂಗಳೂರಲ್ಲಿ ಕೆಲಸ ಮಾಡ್ತಾ ಇದ್ದ ಸಮಯ ...ಆಗ ನಾನು ಅಣ್ಣ ಅತ್ತಿಗೆ ಜೊತೆ ಮಲ್ಲೇಶ್ವರಂಅಲ್ಲಿ ಇದ್ದೆ....ಅಣ್ಣ ಬಾಡಿಗೆಗೆ ಇದ್ದ ಮನೆಯ ಓನರ್ ಹೆಸರು ಕುಬೇರ್ ....ವಯಸ್ಸಾದವರು...ತುಂಬಾ ದಪ್ಪ ಇದ್ರು....ಸಾತ್ವಿಕರು ...ಪೂಜೆ, ಪುನಸ್ಕಾರ ಮಡಿ...ಮೈಲಿಗೆ ಎಲ್ಲ ತುಂಬಾ ಜೋರಾಗಿ ಇದ್ದ ವ್ಯಕ್ತಿ......ಅವರಿಗೆ ನಾನು ಅಂದ್ರೆ ತುಂಬಾ ಪ್ರೀತಿ....ಆ ಸಮಯದಲ್ಲಿ ನನ್ನ ಅಕ್ಕ ಒಬ್ಬಳು ಜಾಬ್ ಗೆ ಹೋಗುವಾಗ ಅವಳ ಚಿಕ್ಕ ಮಗನನ್ನು ಅಣ್ಣ ನ ಮನೆಯಲ್ಲಿ ಬಿಟ್ಟು ಹೋಗ್ತಾ ಇದ್ದಳು...ಬರುವಾಗ ವಾಪಸ್ ಕರ್ಕೊಂಡು ಹೊಗೋಳು ...ಪಾಪ ನನ್ನ ಅಕ್ಕನ 
ಮಗನಿಗೆ ನನ್ನನ್ನ ಮಮತಾ ಅಂತ ಕರೆಯೋಕೆ ಬರದೆ ಪುತಾತ ಅಂತ ಕರಿತಿದ್ದ...ನನಗೂ ಅವನು ಮುದ್ದು ಮುದ್ದಾಗಿ ಪುತಾತ ಅಂದಾಗ ಏನೋ ಖುಷಿ ಆಗ್ತಿತ್ತು....ಅದನ್ನ ಕೇಳಿಸಿಕೊಂಡ ಈ ಕುಬೇರಜ್ಜ ಕೂಡ ನನ್ನನ್ನು ಪುತಾತ ಅಂತಾನೆ ಕರೀತಿದ್ರು ....ಯಾವಾಗಲೂ ಕೆಲಸದಿಂದ ಬರುವಾಗ ಬಾಗಿಲಲ್ಲೇ ನಿಂತು ಮಾತಾಡಿಸಿಯೇ ಹೋಗ್ತಿದ್ರು....ಆಮೇಲೆ ನನ್ನ ಮದುವೆ ಆಗಿ ಗಂಡನ ಮನೆ ಸೇರಿದೆ.....ಒಂದು ವರುಷದ ನಂತರ ತಿರುಗಾ ಅಣ್ಣ ನ ಮನೆಯಲ್ಲಿ ಉಳಿಯೋ ಪ್ರಸಂಗ ಬಂತು....ಎನಕ್ಕೆ ಅಂತ ತಿಳಿತಲ್ವ....ಒಡಲಲ್ಲಿ ಕರುಳ ಕುಡಿ ಒಡೆದಿತ್ತು ....ಮೊದಲ ಡೆಲಿವರಿ ತಾಯಿಮನೆಯಲ್ಲಿ ಅಂತ ಅಣ್ಣನ ಮನೆ ಬೆಂಗಳೂರಿಗೆ ಹೋದೆ.....ತಾಯಿ ಕೂಡ ಅಲ್ಲಿಗೆ ಬಂದಿದ್ದರು...ನವ ವಸಂತ ತುಂಬಿದ್ದ ನಾನು ಕುಬೇರಜ್ಜನಷ್ಟೆ ದೊಡ್ಡ ಹೊಟ್ಟೆ ಹೊತ್ತು ಕುಳಿತಿದ್ದೆ ಆ ದಿನ ಪುತಾತ ...ಪುತಾತ ಅಂತ ಕರೆಯುತ್ತ ಉಸ್ಸ್.. ಅಂತ ಉಸಿರು ಬಿಡುತ್ತಾ ಒಂದೊಂದೇ ಮೆಟ್ಟಿಲು ಹತ್ತುತ್ತ ಬಂದರು (ಮಹಡಿಯಲ್ಲಿ ನಾವಿದ್ದಿದ್ದು )ಕುಬೇರಜ್ಜ....ನಾನು ಆಯಿ ಹತ್ತಿರ ಮಾತಾಡ್ತಾ ಕೂತಿದ್ದೆ....ಏನು ಅಂತ ಕೇಳಿದಾಗ....ಪಾಪ ಬಸಿರು ಹುಡುಗಿ ತಿನ್ನಲಿ ಅಂತ ತಂದೆ ಅನ್ನುತ್ತ ಅವರ ಪ್ಯಾಂಟ್ ಕಿಸೆಯಿಂದ ಎರಡು ಬೇಸನ್ ಲಾಡು ತೆಗೆದು ಕೊಟ್ರು....ನನಗೆ ಏನು ಹೇಳಬೇಕೋ ಗೊತ್ತಾಗಿಲ್ಲ....ಅವರು ಒಂದು ಕವರ್ ಅಲ್ಲಿ ಕೂಡ ಹಾಕದೇ ಹಾಗೆ ಪ್ಯಾಂಟ್ ಜೋಬಲ್ಲಿ ಇಟ್ಕೊಂಡು ಬಂದಿದ್ರು.......ಆ ಪ್ಯಾಂಟ್ ಯಾವಾಗ ನೀರಿನ ಮುಖ ಕಂಡಿತ್ತೋ ಏನೋ....ತಿನ್ನೋಕೆ ಮನಸು ಒಪ್ಪುತ್ತಿರಲಿಲ್ಲ....ಬೇಡ ಅನ್ನೋಕೆ ಅವರ ಪ್ರೀತಿ ಕಾಳಜಿ ಅಡ್ಡ ಬರುತ್ತಿತ್ತು....ಆಯಿ ಮುಖ ನೋಡಿದೆ...ಆಯಿ ಒಂದು ಚುರಾದ್ರೂ ತಿನ್ನು ಅಷ್ಟು ಪ್ರೀತಿಯಿಂದ ನಿನಗಾಗಿ ತಂದಿದ್ದಾರೆ...ವಯಸ್ಸಾದವರು ಬೇರೆ ಅಂದಳು...ಅಂತು ಕಷ್ಟಪಟ್ಟು ಒಂದು ಚೂರು ತಿಂದು ಆಮೇಲೆ ತಿಂತೀನಿ ಅಂತ ಆ ಕಡೆ ಯೆತ್ತಿಟ್ಟೆ...ಮತ್ತೆ ಸ್ವಲ್ಪ ಹೊತ್ತು ಮಾತಾಡಿ ಕೆಳಗೆ ಹೋದ್ರು......ಕೆಲವೊಮ್ಮೆ ಅತಿ ಪ್ರೀತಿ ಎಂತಹ ಪೇಚಾಟಕ್ಕೆ ತಂದುಬಿಡುತ್ತೆ ಆಲ್ವಾ......