Wednesday, 4 April 2012


ತೊಳಲಾಟ

ನನ್ನೆದೆಯ ಗೂಡಲ್ಲಿ ಬೆಚ್ಚಗೆ ಕುಳಿತಿರುವೆ ನೀನು
ಎಸ್ಟೆ ಪ್ರಯತ್ನಿಸಿದರು ಹೊರಗಟ್ಟುವಲ್ಲಿ ಸೋಲುತಿಹೆ ನಾನು
ಉಳಿಸಿಕೊಳಲೋ,ಕಳುಹಿಸಿಬಿಡಲೋ ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ ............ಇದು  ಏನು

ಮರೆತುಬಿಡು ಎಲ್ಲವನು ಎನ್ನುತಿದೆ ಮನವು
ಮರೆಯಲಾರೆನು ಎಂದು ಕೂಗುತಿದೆ ಹೃದಯವು
ಕೇಳಲಾರಮಾತನ್ನು ನಾನು ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ ..............ಇದು ಏನು 

ನೆನಪುಗಳು ಚುಚ್ಚಿ ಚುಚ್ಚಿ ಕಾಡುತಿದೆ
ವಿವೇಕ ವಾಸ್ತವತೆಯ ಎತ್ತಿತೋರುತಿದೆ
ನಾನಾವುದನಾರಿಸಲಿ ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ .............ಇದು ಏನು

ಇದು ಪ್ರೀತಿಯೋ ಇಲ್ಲಾ ಹುಚ್ಚು ಬ್ರಮೆಯೋ
ಇದು ಕನಸೋ ಇಲ್ಲಾ ನನಸೋ
ಹುಡುಕುತಿಹೆ ಉತ್ತರವ ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ............ಇದು ಏನು
No comments:

Post a Comment