Monday, 10 November 2014

ಮಗನ ಬಿಟ್ಟು ಬರ್ತಾ ಇದ್ದೆ...ಸಿಗ್ನಲ್ ಅಲ್ಲಿ ಕಾರ್ ನಿಲ್ಸಿದಾಗ ಪಕ್ಕದಲ್ಲೇ ಬಸ್ಸು ನಿಂತಿತ್ತು...ಸುಮ್ಮನೆ ಮೇಲೆ ನೋಡಿದೆ..ಅಲ್ಲಿಯ ಡ್ರೈವರ್ ನೋಡಿದಾಗ ಅವನು ನನ್ನ ಕಡೆನೇ ನೋಡಿ ಸ್ಮೈಲ್ ಮಾಡಿದ ...ಮನಸ್ಸು ಯಾಕೋ ಫ್ಲಾಶ್ ಬ್ಯಾಕ್ ಗೆ ಹೋಯ್ತು...ನಾವು ಕಾಲೇಜ್ ಓದ್ತಾ ಇದ್ವಿ ಆಗ...ನಾವು ಹೋಗುವ ಬಸ್ನ ಡ್ರೈವರ್ ಬಾಬು ಅಂತ ಇದ್ದ..ನೋಡಲು ತುಂಬಾ ಚಂದ...ಬೆಳ್ಳಗೆ ಎತ್ತರ ಒಂತರ ಟೈಗರ್ ಪ್ರಭಾಕರನ ಹಾಗೆ ಆದರೆ ಮುಖ ಹಾಗಲ್ಲ..ಯಾವಾಗಲೂ ನಗು ಮುಖ...ನಕ್ಕಿದರೆ ಚಂದದ ಹಲ್ಲು ಆದರೆ ತಲೆ ಮಾತ್ರ ಸ್ವಲ್ಪ ಬಾಲ್ಡ್....ಹುಡುಗೀರ್ ಬಗ್ಗೆ ತುಂಬಾ ಕಾಳಜಿ ..ಎಷ್ಟೆಂದರೆ ಒಂದು ಸ್ಮೈಲ್ ಹಾಕಿದರೆ ಸಾಕು ಬಸ್ ಎಲ್ಲೇ ಬೇಕಿದ್ರು ನಿಲ್ತಿತ್ತು...ವಾರದಲ್ಲಿ ಮೂರು ದಿವಸ ನಮ್ಮ ಟೈಮ್ ಬಸ್ಸಿಗೆ ಅವನಿರುತ್ತಿದ್ದ...ಆದ್ದರಿಂದ ಮೂರು ದಿವಸ ಬಸ್ ತಪ್ಪುತ್ತೆ ಅನ್ನೋ ಚಿಂತೆನೇ ಇರಲಿಲ್ಲ....ಸೀಟ್ ಸಿಕ್ಕದೆ ಇದ್ರೂ ಪರವಾಗಿರಲಿಲ್ಲ...ಯಾಕೆಂದರೆ ಅವನ ಸೀಟ್ ನ ಹಿಂದೆ ನಿಂತುಕೊಳ್ಳುತ್ತಾ ಇದ್ವಿ..ಇದರಿಂದಾಗಿ ತುಂಬಿ ತುಳುಕುತ್ತಿದ್ದ ಬಸ್ ಅಲ್ಲಿ ಬೇರೆಯವರ ಕಾಟದಿಂದ ಮುಕ್ತಿ ಸಿಗುತ್ತಿತ್ತು...ನಾವು ಎಲ್ಲಾದರೂ ರೋಡ ಅಲ್ಲಿ ನಡೆದು ಹೋಗುವಾಗ ಕಂಡ್ರೆ ಜೋರಾಗಿ ಒಂದು ಹಾರ್ನ್ ಮಾಡ್ತಿದ್ದ..ನಮಗೆಲ್ಲ ಆ ಹಾರ್ನ್ ಇಂದಲೇ ಬಾಬು ಡ್ರೈವರ್ ಬರ್ತಾ ಇದ್ದಾನೆ ಅಂತ ಗೊತ್ತಾಗ್ತಿತ್ತು...ತಿರುಗಿ ನೋಡಿದ್ರೆ ಸಾಕಿತ್ತು ಕೈ ಮಾಡಿ ಹೋಗ್ತಿದ್ದ...ಯಾವತ್ತೂ ಕೆಟ್ಟದಾಗಿ ನಡ್ಕೋತಾ ಇರ್ಲಿಲ್ಲ....ಒಂದು ಸಕ್ಕರೆ ಸ್ಮೈಲ್...ಮತ್ತು ಒಮ್ಮೊಮ್ಮೆ ಕೈ ಮಾಡಿ ಹೋಗುತ್ತಿದ್ದ ಬಾಬು ಡ್ರೈವರ್....ಹೆಚ್ಚಾಗಿ ಡ್ರೈವರ್ಗಳೆಂದರೆ  ಮೂಗು ಮುರಿಯುವವರೇ ಹೆಚ್ಚು ..ಆದರೆ ಇಂತಹ ಅಪರೂಪದ ಬಾಬು ಡ್ರೈವರ್ ಅಂತವರೂ ಇರ್ತಾರೆ ಅನ್ನೋದು ಹಲವರು ಮರೆತಿರುತ್ತಾರೆ....ಯಾರನ್ನೇ ಆಗಲಿ ಅವರ ವೃತ್ತಿಯಿಂದ ಅಳೆಯುವದು ಅಪರಾಧ...ಎಲ್ಲರಲ್ಲೂ ಒಬ್ಬ ಹೃದಯವಂತ ಅನ್ನೋನು ಇದ್ದೇ ಇರುತ್ತಾನೆ...

4 comments:

 1. ಇಂತ ಹೃದಯವಂತರು ಅಪರೂಪ ಕಣ್ರೀ...

  ReplyDelete
 2. ಹೌದು...ಅಪರೂಪಕ್ಕೆ ಒಬ್ಬೊಬ್ಬರು ಇರ್ತಾರೆ....:)

  ReplyDelete
 3. ಹೃದಯವಿದ್ದಲ್ಲಿ ಹೃದಯವಂತನಿರಲೇಬೇಕು, ಹೃದಯವಂತನಾದಾಗಲೇ ಹೃದಯ ನಿಂತರೂ ಅವನ ಮಾತುಗಳು, ನೆನಪುಗಳು ನಿಲ್ಲುವುದಿಲ್ಲ ಇತರರ ಮನದೊಳಗೆ.

  ReplyDelete
 4. ಧನ್ಯವಾದಗಳು....ಮನಸಿನಮನೆಯವನು

  ReplyDelete