Thursday 20 November 2014

ಎಂದು ಬರುವನೆ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ವಿರಹದಲಿ ಬೇಯುತಿಹೆ ಅವನಿಗಾಗಿ
ಹಸಿವು ನಿದ್ದೆಯರಿವಿಲ್ಲ ಅವನಿಂದಾಗಿ 
ಎಂದು ಅರಿವನೇ ಸಖಿ ನನ್ನ ಮನದೊಲವು
ಅವನ ನೆನಪೇ ಮೈ ಪುಳಕವೆಬ್ಬಿಸಿದೆ
ಕೆನ್ನೆ ಕೆಂಪೇರಿ ಕಂಗಳಲಿ ಮಿಂಚು
ತನುವೆಕೋ ಕಂಪಿಸಿದೆ ಹೊಸ ಭಾವದಲಿ ಮಿಂದು
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ತಿಳಿಸದಲೇ ಆಲಿಸಬಲ್ಲನೇ ಅವ
ನನ್ನ ಹೃದಯದ ಕೂಗು
ಜಾಣನವ..ಶೂರನವ ಯಾರಿಗೂ ಹೆದರದ ಧೀರನು
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ಅವ ಬಂದ ಆ ದಿನವೇ ನನ್ನ ಪಾಲಿಗೆ ಸ್ವರ್ಗ
ಪ್ರೇಮ ಜಾತ್ರೆಯಲಿ ಮೆರವಣಿಗೆಯ ಹಬ್ಬ
ಕಾಯುತಿರುವೆನು ನಾ ಕಾತರದಿ ಅವನಾಗಮನಕೆ
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ

1 comment:

  1. §ತಿಳಿಸದಲೇ ಆಲಿಸಬಲ್ಲನೇ ಅವ
    ನನ್ನ ಹೃದಯದ ಕೂಗು§
    ತಿಳಿಸಿ ಬಿಟ್ಟರಾಯಿತು ಎಂದಳಾ ಸಖಿ!

    ReplyDelete