Wednesday, 1 October 2014

Fear is worst than reality ...ಅನ್ನೋ ಮಾತು ಎಷ್ಟು ಸತ್ಯ ಅನಿಸ್ತು ನಿನ್ನೆಯ ಒಂದು ಘಟನೆಯಿಂದ....ನನ್ನ ಯಜಮಾನರು ಕಾಲೇಜ್ ಸ್ಟುಡೆಂಟ್ ಕರ್ಕೊಂಡು ಕಾಲೇಜ್ ಬಸ್ ಅಲ್ಲಿ ತುಮಕೂರಿಗೆ ಹೋಗಿದ್ರು ಏನೋ ಕೆಲಸಕ್ಕಾಗಿ...ಮೊನ್ನೆನೆ ಹೇಳಿದ್ರು ಬರುವಾಗ ನೀನು ಕಾರ್ ತಕೊಂಡು ಬಾ ನಾನು ಇಳಿಯೋ ಜಾಗಕ್ಕೆ ಅಂತ..ಆಯ್ತು ಅಂತ ನಾನೂ ಹೇಳಿದ್ದೆ...ನಿನ್ನೆ ಅವರು ಎಲ್ಲ ಕೆಲಸ ಮುಗಿದು ತುಮಕೂರ್ ಬಿಟ್ಟಿದ್ದೆ ಲೇಟ್...ಇಲ್ಲಿ ಬರುವಾಗ ರಾತ್ರಿ 12.30.ಸಮಯ...ಶ್ರೀರಂಗ ಪಟ್ಟಣದ ಹತ್ತಿರ ಬರುವಾಗ ಫೋನ್ ಮಾಡಿದ್ರು..ಬಾ ಹೇಳಿದ ಜಾಗಕ್ಕೆ ಅಂತ....ಮಕ್ಕಳೆಲ್ಲ ಮಲಗಿದ್ರು ..ನಾನು ಮನೆ ಲಾಕ್ ಮಾಡಿ ಹೊರಟೆ...ನಿನ್ನೆ ಬೇರೆ ರಾತ್ರಿ 9 ಘಂಟೆ ಅಷ್ಟೊತ್ತಿಗೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ...ಮಳೆ ಬಂದು ನಿಂತಿದ್ದಕ್ಕೋ ಏನೋ ವಾತಾವರಣ ಒಂಥರಾ ಭೀತಿ ಹುಟ್ಟಿಸೋ ಹಾಗೆ..ಜೊತೆಗೆ ಆ ರಾತ್ರಿಯಲ್ಲಿ ಜನರ ಸುಳಿವೇ ಇಲ್ಲ...ಆದರೂ ಯಜಮಾನರ ಕರೆದುಕೊಂಡು ಬರಲು ಹೊರಟೆ..ಅವರ ಬಸ್ ಬರೋಕಿಂತ ಮುಂಚೆ ನಾನು ಅವರು ಹೇಳಿದ ಜಾಗಕ್ಕೆ ಹೋಗಿದ್ದೆ...ಅಲ್ಲೇ ಕಾರ್ ನಿಲ್ಲಿಸಿ...ಕಾಯುತ್ತ ಇದ್ದೆ...ನಿರ್ಜನ ರೋಡ್..ಆಗ ಈಗ ತೊಟ್ಟಿಕ್ಕೋ ನೀರ ಹನಿ ಶಬ್ದ ಜೊತೆಗೆ ಎಲ್ಲೋ ದೂರದಲ್ಲಿ ಕುಡುಕರೋ..ಹುಚ್ಚರೋ ..ಕೂಗೋ ಶಬ್ದ...ನಾನೂ ಒಬ್ಬಳೇ ಕಾಯ್ತಾ ಇದ್ದೆ..ಇದ್ದಕ್ಕಿದ್ದಂತೆ ಒಂದು ಬೈಕ್ ಬಂತು..ನಾನು ಕಾರ್ ಗ್ಲಾಸ್ ಮೇಲೆ ಮಾಡಿ ಕುಳಿತೆ..ಆ ಬೈಕ್ ಸವಾರ ಬಂದು ಕಾರ್ ಗ್ಲಾಸ್ ತಟ್ಟಿದ...ನನಗೆ ಒಂತರ ಹೆದರಿಕೆ ಶುರುವಾಯ್ತು....ಒಂದೇ ಕ್ಷಣದಲ್ಲಿ ದಂಡು ಪಾಳ್ಯದ ಕಳ್ಳರಿಂದ ನಿರ್ಭಯಳ ಕೇಸ್ ವರೆಗಿನ ರೀಲ್ ಮನಸ್ಸಲೇ ಬಿಚ್ಕೊಂಡ್ತು ...ಉಮೇಶ್ ರೆಡ್ಡಿ ಯಿಂದ..ಮೊನ್ನೆ ಮೊನ್ನೆ ವರೆಗೆ ಭೀತಿ ಹುಟ್ಟಿಸಿದ ಜೈ ಶಂಕರ ನೆನಪಾದ...ಏನು ಮಾಡಲಿ ಅಂತ ತಿಳಿಯದಾದೆ...ಆದರೂ ಎಲ್ಲೋ ಒಂದು ಕಡೆ ನನಗೆ ಆತ್ಮವಿಶ್ವಾಸ ..ನಾನು ಯಾರಿಗೂ ಮೋಸ ಮಾಡಿಲ್ಲ ಹಾಗಾಗಿ ಆ ದೇವರು ನನಗೆ ಮೋಸ ಮಾಡಲ್ಲ ಅಂತ...ಅಂತು ಕತ್ತಲ್ಲಿದ್ದ ಗಣೇಶನ ಲಾಕೆಟ್ ಕಣ್ಣಿಗೆ ಒತ್ತುಕೊಂಡು ವಿಂಡೋ ಗ್ಲಾಸ್ ಇಳಿಸಿದೆ..ಕೋಪದಲ್ಲಿ ಏನು ಅಂತ ಕೇಳಿದೆ...ಆಗ ಅವನು ಏನಿಲ್ಲ ಮೇಡಂ ಒಬ್ರೇ ಈ ರಾತ್ರಿಯಲ್ಲಿ ಕಾರ್ ನಿಲ್ಸಿದ್ದೀರಿ...ಕಾರ್ ಗೆ ಏನೋ ಪ್ರಾಬ್ಲಮ್ ಆಯ್ತಾ ..ಏನಾದ್ರು ಹೆಲ್ಪ್ ಬೇಕಾ ಅಂತ ಕೇಳೋಕೆ ಬೈಕ್ ತಿರುಗಿಸಿ ಬಂದೆ ...ಅಂದ ..ನನಗೆ ಏನು ಹೇಳೋಕು ತೋಚಲಿಲ್ಲ..ನಾನು ನಗುತ್ತ ಇಲ್ಲ..ಯಜಮಾನರಿಗೆ ಕಾಯ್ತಿದೀನಿ ..ಧನ್ಯವಾದ ..ಎಂದೆ ಓಕೆ ಮೇಡಂ ಅಂದು ಹೊರಟು ಹೋದ....ನನಗೆ ನನ್ನ ಮೇಲೆ ನಾಚಿಕೆ ಎನಿಸಿತು...ಏನೇನೋ ವಿಷಯ ಓದಿರ್ತಿವಿ.ಕೇಳಿರ್ತಿವಿ ..ಅದಕ್ಕಾಗಿ ಮನಸ್ಸು ಎಲ್ಲರನ್ನೂ ಒಂದೇ ತರದಲ್ಲಿ ಯೋಚಿಸಿಬಿಡುತ್ತೆ..ಒಳ್ಳೆಯವರು ಕೂಡ ನಮ್ಮ ಮನಸ್ಸಲ್ಲಿ ಕೆಟ್ಟವರಾಗಿ ಬದಲಾಗಿ ಬಿಡ್ತಾರೆ ಇಂತ ಸಂಧರ್ಬದಲ್ಲಿ...ಅದ್ಕೆ ಹೇಳೊದು ಹೆದರಿಕೆ ..ಅಥವಾ..ಯೋಚನೆ ಅನ್ನೋದು ನೈಜತೆಗಿಂತ ಎಷ್ಟು ಕೆಟ್ಟದ್ದಾಗಿರುತ್ತೆ ಒಮ್ಮೊಮ್ಮೆ...ಹೆದರಿಕೆ ಕೂಡ ಹುಟ್ಟೋದು ಯೋಚನೆಯಿಂದನೆ ಅಲ್ವಾ ...ನಾವು ಒಮ್ಮೊಮ್ಮೆ ಈ ಜಗತ್ತಲ್ಲಿ ನಿಜವಾಗಿ ಯಾರೂ ಇರೋಲ್ಲ ನಮಗೆ ನಾವಷ್ಟೇ ಅಂತ ಅಂದುಕೊಂಡು ನಿಜವಾದ ಪ್ರೀತಿ..ಸ್ನೇಹವನ್ನೂ ಅನುಮಾನಿಸಿ ಬಿಡುತ್ತೇವೆ...ಆದರೆ ತಮಾಷೆ ಅಂದರೆ ಈ imegination ಅನ್ನೋದು reality ಗಿಂತ ಕೆಟ್ಟದ್ದಾಗಿರುತ್ತೆ.....ಅದಕ್ಕೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕಾಗುತ್ತದೆ...

2 comments:

  1. ತಮ್ಮ ಈ ಪ್ರಸಂಗ ಓದುತ್ತಿದ್ದರೆ, ಹಲವು ವರ್ಷಗಳ ಹಿಂದೆ ಎಲ್ಲೋ ಊರ ಹೊರಗಿರುವ ರವಿಶಂಕರ್ ಆಶ್ರಮದಲ್ಲಿ ಶುಟಿಂಗ್ ಮುಗಿಸಿ, ಕ್ಯಾಮರಾ ಬ್ಯಾಗ್ ಸಮೇತ ಕನಕಪುರ ರಸ್ತೆಯಲ್ಲಿ ರಾತ್ರಿ ಎರಡು ಗಂಟೆಯಲ್ಲಿ ಅನಾಥನಂತೆ ನಿಂತಿದ್ದ ನನ್ನ ಅಸಹಾಯಕ ಸ್ಥಿತಿ ನೆನಪಾಯಿತು! :(

    ReplyDelete
  2. ಒಮ್ಮೊಮ್ಮೆ ಈ ಜೀವನ ಎಂತೆಂತ ಪರಿಸ್ಥಿತಿಯನ್ನ ಎದಿರಿಸೋ ಹಾಗೆ ಮಾಡುತ್ತದೆ....:(

    ReplyDelete