Thursday 16 October 2014

ಓಡುತಿರುವ ಓ ಮೇಘಗಳೆ ತುಸು ನಿಲ್ಲಿ ಅಲ್ಲೇ 
ಕಳುಹಿಸಬೇಕಿದೆ ನನ್ನೆದೆಯ ಬೆಚ್ಚನೆಯ ಭಾವಗಳ 
ನನ್ನವನಿರುವೆಡೆಗೆ....
ಜತನದಲಿ ಸಲಹಿರುವೆ ಅವನ ಪ್ರೀತಿಯನು 
ಇಂದೇಕೋ ತಡೆಯದಾಗಿಹೆ ನನ್ನ ಭಾವವನು 
ಹೊತ್ತೊಯ್ದು ತಲುಪಿಸಿರಿ ಅವನೆದಯ ಗೂಡಿಗೆ ....
ಹಾಗೆಯೇ ಸುರಿಸಿಬಿಡಿ ನಾಲ್ಕು ಹನಿ ಮಳೆ ನೀರು
ನೆನೆಪಾಗಲಿ ಅವಗೆ ನನ್ನ ಮೌನದ ಕಣ್ಣೀರು
ನೋವೆಲ್ಲ ನನಗಿರಲಿ ನಲಿವಿರಲಿ ಅವಗೆ......ಕೀಮ

2 comments:

  1. ಮಳೆ ಹನಿಯದು ನೆನಪ ಕಣ್ಣೀರಿಗೆ ಹೋಲಿಸಿ ಗೆದ್ದಿರಿ ಕವಿಯತ್ರೀ...

    ReplyDelete
  2. ಧನ್ಯವಾದಗಳು...ಬದರಿ ಸರ್....

    ReplyDelete