Tuesday 5 August 2014

ನಾನಿಲ್ಲಿ ಒಂಟಿ ನೀ ಅಲ್ಲಿ ಒಂಟಿ
ನಡುವೆ ಸೇತುವೆಯಂತೆ
ವಿರಹದಾ ಬೆಂಕಿ
ಮಂದದಲಿ ಬೀಸುತಿದೆ ಹೊರಗೆ ಕುಳಿರ್ಗಾಳಿ
ಮುದುರಿದೆ ಮೈ ಚಳಿಗೆ ನಡುಕ
ಒಳಒಳಗೆ ದಹಿಸಿ ಮನ ಪರದಾಡುತಿದೆ
ಸುಪ್ತ ಜ್ವಾಲಾಮುಖಿಯ ತೆರದಿ
ನನ್ನೆದೆಯ ಬಡಿತವೇ ಅಪ್ಪಳಿಸಿದೆ
ಸಿಡಿಲಂತೆ ಕಿವಿಗೆ
ನಿದ್ದೆಯಲೂ ಅರಸುತಿದೆ ಕೈ
ಪಕ್ಕದಲಿ ನಿನ್ನ ಹಾಜರಾತಿಗೆ
ಎಲ್ಲಿದ್ದರೂ ಬಂದುಬಿಡು
ಬೋರ್ಗರೆವ ಮಳೆಯಂತೆ
ತಣಿದು ಸುಖದಲಿ ನರಳಲಿ ಇಳೆಯು
ಸುರಿವ ವರ್ಷ ಧಾರೆಗೆ

2 comments:

  1. ಭಾವೋತ್ಕಟ ಕವನ. ಕಾವ್ಯ ಕನ್ನಿಕೆಗೆ ಒಲಿದು ಬರುವನು ಬೇಗ ಧೀರ ಪುರುಷ.

    ReplyDelete
  2. ಧನ್ಯವಾದಗಳು

    ReplyDelete