Tuesday, 12 August 2014

ಬಾಳ ಕತ್ತಲಿಗೆ ಬೆಳಕಾಗುವೆನೆಂದೆ 
ಅದಾವ ಗಾಳಿ ಅಡರಿತೋ ಕಾಣೆ 
ಕಾರ್ಗತ್ತಲ ತುಂಬಿ ಹೋದೆ

ಅರಿಯಲ್ಹೇಗೆ ಕಾರಣವ 
ಬೆಳಕಿನ ಕಿಡಿಯೇ ಇಲ್ಲದಿರೆ 
ದೃಷ್ಟಿ ಮಂಜಾಗಿ ಮಸುಕಾಗಿದೆ 
ನಿನ್ನ ಫಟ ದೂರದಲಿ 

ಹೊಳಪು ಕಳೆದಿದೆ ಭರವಸೆಯ ಮಿಂಚಲ್ಲಿ
ದ್ವಂದ್ವ ಕಲುಕಿದೆ ಮನವ
ನಿಟ್ಟುಸಿರೊಂದೆ ಶೇಷವಾಗಿದೆ
ತತ್ವಗಳಾವುದು ಸರಿ ಹೊಂದದೆ

2 comments:

  1. ತತ್ವಗಳು ಹೊಂದದಾಗ ಫಟವೂ ದೂರ ದೂರ...

    ReplyDelete