Sunday 3 August 2014

ಇಂದೇಕೋ ಮೇಳೈಸಿದೆ ಹೊಸದೊಂದು ರಾಗ 
ತುಂಬುತಿದೆ ಚೈತನ್ಯ ಇಂಬಾಗಿ ಮನಕೆ 
ಸರಿಸಿ ಇಣುಕುತಿದೆ ಅದೇನೋ ಲಾಸ್ಯ 
ಕಟ್ಟಿದ ಕಾರ್ಮೋಡದ ಮುಸುಕ 

ಮನವೆಲ್ಲ ಹಗುರ ಗಗನಕೆ ಹಾರುವಾಸೆ 
ಹಿಡಿದು ಬಂಧಿಸುವಾಸೆ ಬಾನ ಚಂದಿರನ 
ಸುತ್ತ ಕತ್ತಲಿದ್ದರು ಹೊಳೆದಿದೆ ದೂರದಲೊಂದು ಚುಕ್ಕಿ 
ಕೈಬೀಸಿ ಕರೆದಂತಿದೆ ಭರವಸೆಯ ಬಿತ್ತಿ 

ಮನ ಮಿಡಿಯುತಿದೆ ತನು ಅರಳುತಿದೆ
ಜೊತೆ ಅರೆಮಿಲಿತ ನೇತ್ರ
ಚಿರವಾಗಲಿ ಈ ಘಳಿಗೆ
ಇನಿತೂ ಸರಿಯದೆ ಕಾಲ...

2 comments:

  1. 'ಚಿರವಾಗಲಿ ಈ ಘಳಿಗೆ
    ಇನಿತೂ ಸರಿಯದೆ ಕಾಲ...'
    ನಮ್ಮದೂ ಬಯಕೆಗಳನು ತಾವು ಹೀಗೆ ಬರೆದುಕೊಟ್ಟು ಉಪಕರಿಸಿದ್ದೀರಿ.

    ReplyDelete
  2. ಧನ್ಯವಾದಗಳು ಬದರಿ ಸರ್

    ReplyDelete