Monday 25 August 2014

ಅದಾವುದೋ ಸ್ವರಕ್ಕೆ ಶೃತಿ ಯಾಗಿದೆ 
ಹೃದಯ ವೀಣೆಯ ತಂತಿ ....

ಅರಿಯಲಾರದೇ ಹೋದೆ ಇದಾವ ರಾಗವೆಂದು 
ಮೀಟಿದ್ದನ್ನ ಹಾಡೋದಷ್ಟೇ ನನ್ನ ಕೆಲಸವು 
ಭಾವ ರಸಗಳು ಬದಲಾದವು 
ಒಮ್ಮೆ ಮಂದ್ರಕ್ಕೂ ಇನ್ನೊಮ್ಮೆ ತಾರಕಕ್ಕೂ 

ಸಂಯೋಜಿಸಿದವರಾರೋ ಈ ಹಾಡು 
ಅನಿಸುತ್ತಿದೆ ಈಗ ಇದು ಶಿವರಂಜಿನಿ ಯೆಂದು
ಮೀಟಿಸಿಕೊಳ್ಳುವದಷ್ಟೇ ತಂತಿಯ ಕೆಲಸ 
ಮುಷ್ಕರ ಹೂಡುವ ಆಯ್ಕೆ ಎಲ್ಲಿದೆ ಅದಕೆ ...

2 comments:

  1. ನೋವನೇ ಮಿಡಿಯುವ ದನಿಯಂತೆ ಶಿವರಂಜಿನಿ ರಾಗ ಅಂತೆಲ್ಲೋ ಕೇಳಿದ್ದೆ.
    ಯಾಕೋ ಅವಳು ನೆನಪಾದಳು, ಮಂಜಾಯಿತೆನ್ನ ಕಣ್ಣು.

    ReplyDelete
  2. ಹೌದು ..ಶಿವರಂಜಿನಿ ನೋವಿನ ರಾಗ.....ಧನ್ಯವಾದಗಳು...

    ReplyDelete