Saturday 8 February 2014

ಸ್ನೇಹ ..

ನೀ ಕರೆದಾಗೆಲ್ಲ ಓ ಎಂದು ಮುದ್ದಿಸಿ ರಮಿಸಲು ನಾ ನಿನ್ನ ಹೆಂಡತಿಯಲ್ಲ 
ನಿನ್ನ ಬೈಗುಳವ ತಿಂದು,ತಪ್ಪನೆಲ್ಲ ಒಡಲಲ್ಲಿಟ್ಟು ನಗಲು ನಾ ನಿನ್ನ ತಾಯಿಯಲ್ಲ 
ನಿನ್ನ ಕನಸಿಗೆ ಲಗ್ಗೆ ಇಟ್ಟು ನಿದಿರೆಯ ಕದ್ದೊಯ್ಯಲು ನಾ ನಿನ್ನ ಪ್ರೇಮಿಯಲ್ಲ 
ನಿನ್ನ ಸುಖದಲಿ ನಕ್ಕು ಕಷ್ಟದಲಿ ಕಣ್ಣೀರೊರೆಸಿ ಶುಭವನ್ನೇ ಹಾರೈಸುವ ನಾ ನಿನ್ನ ಸ್ನೇಹಿತೆ ......

2 comments:

  1. ಯಶೋದೆಯೇ ಸತ್ಯಳೋ ಅದ ಮೀರಿ ಗೆಳತಿಯೋ! ವಿವರಣೆ ತುಂಬ ಚೆನ್ನಾಗಿ ಮೂಡಿಬಂದಿದೆ.

    ReplyDelete
  2. ಧನ್ಯವಾದಗಳು...:)

    ReplyDelete