Monday, 9 December 2013

ಅವಸರವೇಕೆ.... 

ನೀನೆ ಬರೆದ ಚಿತ್ರಗಳಲ್ಲವೇನೋ ಗೆಳೆಯಾ 
ಈಗೇಕೆ ಮಾಡುತಿಹೆ ಅಳಿಸುವ ವ್ಯರ್ಥ ಪ್ರಯತ್ರ್ನವಾ 
ಬಣ್ಣ ತುಂಬುವಲ್ಲಿ ನೀನು ಸೋತರೆನಂತೆ ಉಳಿಯಲು ಬಿಡೋ 
ಕಪ್ಪು ಬಿಳುಪಿನ ಚಿತ್ರವಾಗಿ ಮನಸಿನಾ ಪಟದಲಿ

ಕನಸಿನಾ ಚಿತ್ರಗಳಿವು ಓರೆ ಕೋರೆ ಸಹಜ ಕಣೋ
ತಪ್ಪನೆತ್ತಿ ತೋರಿಸಲು ನಾನೇನು ಪ್ರವೀಣ ಚಿತ್ರ ಕಾರಳಲ್ಲ
ಅಸ್ವಾಧಿಸಲು ಬಿಡೊ ನನಗೆ
ಬರೆದ ಆ ಕೈಗಳ ಹಿಂದಿನಾ ಪ್ರೀತಿಯಾ

ಬಿಡಿಸಿಯಾದ ಚಿತ್ರಗಳ ನೆನೆದು ಕೊರಗಲೇ ಬೇಡ
ನಡೆಯುವಾಗ ಎಡವುದು ಸಹಜ ತಾನೆ
ತಪ್ಪು ಅರಿವಾದಲ್ಲಿ ಸಹನೆಯಲಿ ಕಾಯೊ
ತಿದ್ದುಪಡಿ ಸಾಧ್ಯ ಮುಂದೆ ನೀ ಬರೆವ ಚಿತ್ರದಲಿ

ಸಾಧ್ಯವಾದರೆ ಮುಂದೊಂದುದಿನ ಬಣ್ಣಗಳ ಬಳಿದು ಬಿಡು
ಓರೆಕೋರೆಗಳೆಲ್ಲಾ ಮುಚ್ಚಿ ಮೆರೆವುದಾಗ ನೋಡು
ಇಲ್ಲಿ ಬೆಲೆ ಬರೆ ಆಢ೦ಬರಕೆ ಇರುವಾಗ
ವ್ಯವಧಾನವಿಲ್ಲ ಆಲಿಸಲು ಬಣ್ಣದ ಹಿಂದಿನ ನಿನ್ನ ಮೂಕ ರೋದನವ

4 comments:

  1. ತುಂಬಾ ಚಂದದ ಕವಿತೆ......

    ಓರೆ ಕೋರೆಗಳೆಲ್ಲಾ ಮುಚ್ಚಿ ಹೋಗಿವೆ....
    ಸ್ಪಷ್ಟವಾಗಿ ಭಾವ ಗೋಚರವಾಗುತ್ತಿದೆ.....

    ReplyDelete
  2. ನಿಜವಾದ ಒಲುಮೆಗೆ ಬಣ್ಣದ ಹಂಗಿಲ್ಲ. ತುಂಬ ಇಷ್ಟವಾಯಿತು.

    ReplyDelete