ನೆನಪು
ನಿನ್ನ ನೆನಪು ಕೈಬೀಸಿ ಕರೆವುದು
ಏಕಾಂತದಲಿ ನಾ ಕುಳಿತಿರಲು
ಹರುಷದೊನಲು ಉಕ್ಕಿಉಕ್ಕಿ
ಧಮನಿಗಳಲಿ ಹರಿವುದು.
ನಿನ್ನ ಮುಖವು ತೇಲಿಬಂದು
ಮಧುರನಗುವಲಿ ಸೆಳೆವುದು
ಕಣ್ಗಳೆರಡು ತುಂಟತನದಿ
ಏನೋ ಕೇಳುತಿರುವದು
ನಿನ್ನ ಪಿಸು ಮಾತಿನಲೆಯ
ಗಾಳಿ ತಂದು ಉಲಿವುದು
ಮೂಡಿ ಮನದಿ ಮಧುರ ಕಂಪನ
ನಾಚಿಕೆ ಪೊರೆ ಹೊದೆವುದು.
ನಿನ್ನ ನೆನಪು ಕೈಬೀಸಿ ಕರೆವುದು
ಏಕಾಂತದಲಿ ನಾ ಕುಳಿತಿರಲು
ಹರುಷದೊನಲು ಉಕ್ಕಿಉಕ್ಕಿ
ಧಮನಿಗಳಲಿ ಹರಿವುದು.
ನಿನ್ನ ಮುಖವು ತೇಲಿಬಂದು
ಮಧುರನಗುವಲಿ ಸೆಳೆವುದು
ಕಣ್ಗಳೆರಡು ತುಂಟತನದಿ
ಏನೋ ಕೇಳುತಿರುವದು
ನಿನ್ನ ಪಿಸು ಮಾತಿನಲೆಯ
ಗಾಳಿ ತಂದು ಉಲಿವುದು
ಮೂಡಿ ಮನದಿ ಮಧುರ ಕಂಪನ
ನಾಚಿಕೆ ಪೊರೆ ಹೊದೆವುದು.
ಮಧುರ ನೆನನಪುಗಳು ಉಂಟುಮಾಡುವ ಪುಳಕವನ್ನು ಮನೋಹರವಾಗಿ ಚಿತ್ರಿಸಿದ್ದೀರಾ.
ReplyDeleteನಿನ್ನ ಪಿಸು ಮಾತಿನಲೆಯ
ReplyDeleteಗಾಳಿ ತಂದು ಉಲಿವುದು
ತುಂಬಾ ಚಂದದ ಸಾಲು..... ಕಲ್ಪನೆಗೆ ಶರಣು.....
ಧನ್ಯವಾದಗಳು ..ಬದರಿ ಸರ್ ..:)
ReplyDeleteಧನ್ಯವಾದಗಳು..ಕನಸು ಕಂಗಳ ಹುಡುಗ..:)
ReplyDelete