Tuesday 13 August 2013

ಹೀಗೊಂದು ಮನವಿ (ನಲ್ಲನಿಗೆ)
ಈ ಲೋಕದಲಿ ಎಲ್ಲದಕೂ
ಅಡೆತಡೆಯಾದರೇನಂತೆ ನಲ್ಲ
ಕನಸಿನ ರಾಜ್ಯದಲಿ
ಇದಾವುದೂ ಇರುವದೇ ಇಲ್ಲ
ನೀ ಬಯಸಿದರೆ ಹೋಗಬಹುದು ಯೌವನಕೆ
ನಾನೂ ಬರಬಹುದು ನಾಚುತ್ತ ನಿನ ಸನಿಹಕೆ
ಇಲ್ಲಾದರುಂಟು ಬದುಕಿನ ಹಲವುಹತ್ತು ಅನಿವಾರ್ಯತೆಯ ನಂಟು
ಅಲ್ಲಾದರೆ ಕರೆದರಷ್ಟೇ ಬಂದುಹೋಗುವವರುಂಟು
ಮತ್ತೇಕೆ ತಡ ಬದುಕೋಣ ಕನಸಲ್ಲಿ ಸ್ವಲ್ಪವಾದರೂ ಸಮಯ
ಸವಿದುಬಿಡೋಣ ಅಲ್ಲಲ್ಲಿ ತಪ್ಪಿ ಕಾಡುವ ರಸಘಳಿಗೆಯ ಕ್ಷಣ 

4 comments:

  1. ಇಗೊಳ್ಳಿ ಇದನ್ನೇ ನನ್ನ ಮಡದಿಗೂ ಓದಿ ಹೇಳಿ, ಯವ್ವನಕ್ಕೆ ಹಿಂದಿರುಗಿದೆವು! :)

    ReplyDelete
  2. ನಿಮ್ಮ ಮನಸ್ಸಿನಿಂದ ನೇರವಾಗಿ ಅಕ್ಷರವಾಗಿ ಮೂಡಿದ ನಿಮ್ಮ ಈ ಕವನ, ಆಧುನಿಕ ಯೋಚನಾಲಹರಿ ಮತ್ತು ಪುರಾತನ ತತ್ವ ದ್ವಂದ್ವದ ಮನಸಿನಲಿ ಎಂಬ ಸಾಲುಗಳು ತುಂಬ ಇಷ್ಟವಾದವು.
    ನನ್ನ ಬ್ಲಾಗಿಗೂ ಭೇಟಿ ಕೊಡಿ. ಒಂದು ಒಳ್ಳೇಯ ಕಥೆ ನಿಮಗಾಗಿ ಕಾದಿದೆ.

    ReplyDelete
  3. khandita beti koduve...thank u..Chandrashekar Ishwar Naik

    ReplyDelete