Wednesday 28 August 2013

ಹೀಗೇಕೆ ...

ನೇರ ಸರಳತೆಯಲಿ ಬದುಕಬೇಕೆನ್ನುವ ಮನಕೆ
ಬಲವಂತದಾ ಮುಖವಾಡ
ತರುವದದೆಷ್ಟು ಕಷ್ಟ..

ಕಿತ್ತೊಗೆಯ ಬೇಕೆನ್ನುವ ಹಠ ಒಂದೆಡೆ
ತೆಗೆದರಾಗುವ ಅನಾಹುತಕೆ
ಭಯದ  ಹುತ್ತ ಮತ್ತೊಂದೆಡೆ

ರೋಷದ ತುಡಿತದಲಿ ಕೈ ಮುಂದೆ ನುಗ್ಗುತಿರೆ
ವಿವೆಕತೆಯ ಪಾಠ ನಡುಗಿಸಿ ತಳ್ಳುತಿದೆ ಹಿಂದೆ
ಗಹಗಹಿಸಿದೆ ಅಸಹಾಯಕ ಅಂತರಾತ್ಮ

ಈ ನ್ಯಾಯ ಹೆಣ್ಣಿಗೊಂದೇ ಏಕೆ, ಆಧುನಿಕ ಯೋಚನಾಲಹರಿ
ಹೆಣ್ಣು ಎಷ್ಟೇ ಮೆರೆದರೂ ಅವಳಬಲೆ ಅನ್ನೋ ಪುರಾತನ ತತ್ವ
ದ್ವಂದ್ವದಾ ಮನಸಿನಲಿ ಸರಿತಪ್ಪುಗಳ ತರ್ಕ

ಹೆಜ್ಜೆ ಮುಂದಿಟ್ಟರೆ ಹೆಮ್ಮಾರಿಪಟ್ಟ ಹಿಂದಿಡಲು ತಡೆವಾ  ಸ್ವಾಭಿಮಾನದ ಕಟ್ಟ
ಮುಂದೆಸಾಗದ,ಹಿಂತಿರುಗದ ಒಂಟಿಕಾಲಿನ ಪಯಣ
ಸೆಳೆದೊಯ್ಯಬಹುದೇ ಆಧ್ಯಾತ್ಮದ ಕಡೆಗೆ..

5 comments:

  1. Wav.... suoer kavana... nijavaada dvanda ide kavanadalli...

    ReplyDelete
  2. ಚೆನ್ನಾಗಿದೆ ಕವಿತೆ.. ಹಾಗೆ ನೋಡಿದರೆ ಮುಖವಾಡ ಹಾಗೆ ಇರಗೊಡುವ ಅಥವಾ ಕಿತ್ತೆಸೆವ ದ್ವಂದ್ವ ಮಿಶ್ರಿತ ಭಯಕ್ಕೆ ಗಂಡು ಹೆಣ್ಣಿನ ಭೇದವಿಲ್ಲ...

    ReplyDelete
  3. This comment has been removed by the author.

    ReplyDelete