Sunday, 26 August 2012

ಬದುಕು
ಎಣಿಸಿದಂತೆ ನಡೆಯುವದಿಲ್ಲ 
ನಮ್ಮ ಈ ಜೀವನ
ಒಯ್ದಕಡೆಗೆ ನಡೆಯಬೇಕು
ನೋವ ನಲಿವಿನ ಸಿಂಚನ

ಜನುಮ ಜನುಮದ ದಾರಿಯಲ್ಲಿ
ಹಲವು ಕವಲು ತಿರುವು
ಯಾರದೋ ಶೃತಿಗೆ ಹಾಡಬೇಕು
ಜೀವನವಿದು ಗಾಯನ

ಯಾವ ತುತ್ತ ಚೀಲದಲ್ಲಿ ಯಾರ ಹೆಸರು ಬರೆದಿದೆ
ಯಾವ ಮಣ್ಣಿನಲ್ಲಿ ಯಾರ ಋಣವು ಸೇರಿದೆ
ಬೆಳೆವವನಾರೊ ಪಡೆವವನಾರೊ
ಮೂರುದಿನದ ಬದುಕಿನಲ್ಲಿ

ಬದುಕೆಂಬುದೊಂದು ಸಂತೆ
ನಾವಿಲ್ಲಿ ಬಿಕರಿ ವಸ್ತುವಂತೆ
ಯಾರಿಗೆ ಯಾರು ಕಾವಲಿಲ್ಲ
ಕ್ಷಣಿಕವಿದು ಗಾಳಿಗೊಡ್ಡಿದ ದೀಪದಂತೆ

No comments:

Post a Comment