Friday 24 April 2015


ಕುಬೇರಜ್ಜ ತೋರಿದ ಪ್ರೀತಿ....

ನಾನು ಡಿಗ್ರೀ ಮುಗಿಸಿ ಬೆಂಗಳೂರಲ್ಲಿ ಕೆಲಸ ಮಾಡ್ತಾ ಇದ್ದ ಸಮಯ ...ಆಗ ನಾನು ಅಣ್ಣ ಅತ್ತಿಗೆ ಜೊತೆ ಮಲ್ಲೇಶ್ವರಂಅಲ್ಲಿ ಇದ್ದೆ....ಅಣ್ಣ ಬಾಡಿಗೆಗೆ ಇದ್ದ ಮನೆಯ ಓನರ್ ಹೆಸರು ಕುಬೇರ್ ....ವಯಸ್ಸಾದವರು...ತುಂಬಾ ದಪ್ಪ ಇದ್ರು....ಸಾತ್ವಿಕರು ...ಪೂಜೆ, ಪುನಸ್ಕಾರ ಮಡಿ...ಮೈಲಿಗೆ ಎಲ್ಲ ತುಂಬಾ ಜೋರಾಗಿ ಇದ್ದ ವ್ಯಕ್ತಿ......ಅವರಿಗೆ ನಾನು ಅಂದ್ರೆ ತುಂಬಾ ಪ್ರೀತಿ....ಆ ಸಮಯದಲ್ಲಿ ನನ್ನ ಅಕ್ಕ ಒಬ್ಬಳು ಜಾಬ್ ಗೆ ಹೋಗುವಾಗ ಅವಳ ಚಿಕ್ಕ ಮಗನನ್ನು ಅಣ್ಣ ನ ಮನೆಯಲ್ಲಿ ಬಿಟ್ಟು ಹೋಗ್ತಾ ಇದ್ದಳು...ಬರುವಾಗ ವಾಪಸ್ ಕರ್ಕೊಂಡು ಹೊಗೋಳು ...ಪಾಪ ನನ್ನ ಅಕ್ಕನ 
ಮಗನಿಗೆ ನನ್ನನ್ನ ಮಮತಾ ಅಂತ ಕರೆಯೋಕೆ ಬರದೆ ಪುತಾತ ಅಂತ ಕರಿತಿದ್ದ...ನನಗೂ ಅವನು ಮುದ್ದು ಮುದ್ದಾಗಿ ಪುತಾತ ಅಂದಾಗ ಏನೋ ಖುಷಿ ಆಗ್ತಿತ್ತು....ಅದನ್ನ ಕೇಳಿಸಿಕೊಂಡ ಈ ಕುಬೇರಜ್ಜ ಕೂಡ ನನ್ನನ್ನು ಪುತಾತ ಅಂತಾನೆ ಕರೀತಿದ್ರು ....ಯಾವಾಗಲೂ ಕೆಲಸದಿಂದ ಬರುವಾಗ ಬಾಗಿಲಲ್ಲೇ ನಿಂತು ಮಾತಾಡಿಸಿಯೇ ಹೋಗ್ತಿದ್ರು....ಆಮೇಲೆ ನನ್ನ ಮದುವೆ ಆಗಿ ಗಂಡನ ಮನೆ ಸೇರಿದೆ.....ಒಂದು ವರುಷದ ನಂತರ ತಿರುಗಾ ಅಣ್ಣ ನ ಮನೆಯಲ್ಲಿ ಉಳಿಯೋ ಪ್ರಸಂಗ ಬಂತು....ಎನಕ್ಕೆ ಅಂತ ತಿಳಿತಲ್ವ....ಒಡಲಲ್ಲಿ ಕರುಳ ಕುಡಿ ಒಡೆದಿತ್ತು ....ಮೊದಲ ಡೆಲಿವರಿ ತಾಯಿಮನೆಯಲ್ಲಿ ಅಂತ ಅಣ್ಣನ ಮನೆ ಬೆಂಗಳೂರಿಗೆ ಹೋದೆ.....ತಾಯಿ ಕೂಡ ಅಲ್ಲಿಗೆ ಬಂದಿದ್ದರು...ನವ ವಸಂತ ತುಂಬಿದ್ದ ನಾನು ಕುಬೇರಜ್ಜನಷ್ಟೆ ದೊಡ್ಡ ಹೊಟ್ಟೆ ಹೊತ್ತು ಕುಳಿತಿದ್ದೆ ಆ ದಿನ ಪುತಾತ ...ಪುತಾತ ಅಂತ ಕರೆಯುತ್ತ ಉಸ್ಸ್.. ಅಂತ ಉಸಿರು ಬಿಡುತ್ತಾ ಒಂದೊಂದೇ ಮೆಟ್ಟಿಲು ಹತ್ತುತ್ತ ಬಂದರು (ಮಹಡಿಯಲ್ಲಿ ನಾವಿದ್ದಿದ್ದು )ಕುಬೇರಜ್ಜ....ನಾನು ಆಯಿ ಹತ್ತಿರ ಮಾತಾಡ್ತಾ ಕೂತಿದ್ದೆ....ಏನು ಅಂತ ಕೇಳಿದಾಗ....ಪಾಪ ಬಸಿರು ಹುಡುಗಿ ತಿನ್ನಲಿ ಅಂತ ತಂದೆ ಅನ್ನುತ್ತ ಅವರ ಪ್ಯಾಂಟ್ ಕಿಸೆಯಿಂದ ಎರಡು ಬೇಸನ್ ಲಾಡು ತೆಗೆದು ಕೊಟ್ರು....ನನಗೆ ಏನು ಹೇಳಬೇಕೋ ಗೊತ್ತಾಗಿಲ್ಲ....ಅವರು ಒಂದು ಕವರ್ ಅಲ್ಲಿ ಕೂಡ ಹಾಕದೇ ಹಾಗೆ ಪ್ಯಾಂಟ್ ಜೋಬಲ್ಲಿ ಇಟ್ಕೊಂಡು ಬಂದಿದ್ರು.......ಆ ಪ್ಯಾಂಟ್ ಯಾವಾಗ ನೀರಿನ ಮುಖ ಕಂಡಿತ್ತೋ ಏನೋ....ತಿನ್ನೋಕೆ ಮನಸು ಒಪ್ಪುತ್ತಿರಲಿಲ್ಲ....ಬೇಡ ಅನ್ನೋಕೆ ಅವರ ಪ್ರೀತಿ ಕಾಳಜಿ ಅಡ್ಡ ಬರುತ್ತಿತ್ತು....ಆಯಿ ಮುಖ ನೋಡಿದೆ...ಆಯಿ ಒಂದು ಚುರಾದ್ರೂ ತಿನ್ನು ಅಷ್ಟು ಪ್ರೀತಿಯಿಂದ ನಿನಗಾಗಿ ತಂದಿದ್ದಾರೆ...ವಯಸ್ಸಾದವರು ಬೇರೆ ಅಂದಳು...ಅಂತು ಕಷ್ಟಪಟ್ಟು ಒಂದು ಚೂರು ತಿಂದು ಆಮೇಲೆ ತಿಂತೀನಿ ಅಂತ ಆ ಕಡೆ ಯೆತ್ತಿಟ್ಟೆ...ಮತ್ತೆ ಸ್ವಲ್ಪ ಹೊತ್ತು ಮಾತಾಡಿ ಕೆಳಗೆ ಹೋದ್ರು......ಕೆಲವೊಮ್ಮೆ ಅತಿ ಪ್ರೀತಿ ಎಂತಹ ಪೇಚಾಟಕ್ಕೆ ತಂದುಬಿಡುತ್ತೆ ಆಲ್ವಾ......

5 comments:

  1. ಪ್ರೀತಿಯೂ ಕೆಲವೊಮ್ಮೆ ಪೇಚಾಟಕ್ಕೆ ಮೂಲ ನಿಜ.

    ಅಪರೂಪಕ್ಕೆ ಇತರರ ಬ್ಲಾಗಿಗೂ ಆಗಮಿಸಿ ಹರಿಸಿರಿ.

    ReplyDelete
  2. ಈಗಲೂ ಲಾಡು ನೋಡಿದಾಗೆಲ್ಲಾ ಅದೇ ನೆನಪಾ ಮಮತಾ?

    ReplyDelete
  3. ಹೌದು ಸರ್...ಬೇಸನ್ ಲಾಡು ನೋಡಿದಾಗ ನೆನಪಾಗುತ್ತೆ... :) Talakad Srinidhi

    ReplyDelete
  4. english alli innu enu baredilla ...onderadu putta kavanagala horataagi....swalpa kshta aagutte..deeps

    ReplyDelete