Tuesday 23 September 2014

ನಟ್ಟಿರುಳಿನಾ ಊರಿಗೆ ದಾರಿಯಾ ಸವೆಸುತಿಹೆ
ಕಾಲೆಳೆಯುತಾ ಸುಸ್ತಾಗಿ ..
ಮಧ್ಯದಲಿ ಅರೆ ನಿದ್ದೆ ,ಕಣ್ಮುಚ್ಚಿ
ರಂಗಿನಾ ಕನಸು ಕಾಣುತಿಹೆ...
ಕಣ್ಣು ತೆರೆಯಲೇ ಬೇಕು ದೀಪವಿಡುವ ಸಮಯಕೆ
ಮುಸ್ಸಂಜೆ ಬರುತಲಿದೆ
ಕಬಳಿಸ ಲದೆಷ್ಟು ಹೊತ್ತು ಕತ್ತಲಿಗೆ
ಇದು ಹಗಲೇ ಇರಬಹುದು ಪಾಶಿಮಾತ್ಯರಿಗೆ
ಕತ್ತಲೆಕೋ ಇಷ್ಟ ನಮ್ಮ ಸಂಸ್ಕೃತಿಗೆ
ಕಣ್ಬಿಟ್ಟರೆಲ್ಲಿ ಕನಸು ಕರಗುವ ದೆಂಬ ಭಯ
ಕಾಲ ತಡೆಯುವ ಶಕ್ತಿ ಎನಗಿಲ್ಲವಯ್ಯ
ಬುದ್ಧಿ ಹೇಳುತಿದೆ ಇದು ಹಗಲು ಕನಸೆಂದು
ಹೃದಯವೇಕೋ ಧ್ವನಿಸಿದೆ
ಆತ್ಮದ ಕೊರಿಕೆಯಿದು ನಿಜವಹುದೆಂದು
ಆದರೂ ಒಮ್ಮೊಮ್ಮೆ ಮನುಜನ ಸಹಜ ದೌರ್ಬಲ್ಯ
ಮನ ಅಣಕಿಸಿದೆ ಮರುಳೇ..
ರಂಗಾದರೇನು ..ಕಪ್ಪು ಬಿಳುಪಾದರೇನು
ಮುಂಜಾವಿನ ಕನಸಲ್ಲ ನಿಜವಾಗಲು..
ಏನು ಮಾಡಲು ಅರಿಯೆ....
ಏನು ಯೋಚಿಸಲರಿಯೇ ..
ಹೆಜ್ಜೆ ಚುರುಕಾಗಿಸಿ ಊರ ತಲುಪಲೇನು
ಶೂನ್ಯದಲೇ ಕರಗಿ ಕತ್ತಲಾಗಲೇನು...

2 comments:

  1. ಕವನಕೊಂದು ಕಿರೀಟ ಶೀರ್ಷಿಕೆ.
    'ಕನಸೋ ಕನವರಿಕೆಯೋ?'
    ಅಂತಿಟ್ಟು ನೋಡಿ, ಹಣೆ ಬೊಟ್ಟಂತೆ.

    ReplyDelete
  2. ಎಷ್ಟು ಚಂದದ ಶೀರ್ಷಿಕೆ ಹೇಳಿದಿರಿ..ಏನೂ ಕೊಡಬೇಕೆಂದು ತಿಳಿಯದೇ ಏನೂ ಕೊಟ್ಟಿರಲಿಲ್ಲ...ಧನ್ಯವಾದಗಳು...ಬದರಿ ಸರ್..

    ReplyDelete