Monday 14 July 2014

(ಯಾವದೋ ಕಥೆ...ಇನ್ಯಾರದೋ ವ್ಯಥೆ...ಅಲ್ಪ ಸ್ವಲ್ಪ ವಾಸ್ತವಿಕತೆ.....ಸೇರಿದ ಹೂರಣ..ಈ ಕವಿತೆ..)

ಕನಸ ಕೂಸಿನ ಕಗ್ಗೊಲೆ 

ಭಾವ ನಾಡಿಯು ನಿಂತು ಕನಸ ಕೂಸಿನ ಕಗ್ಗೊಲೆಯಾಗಿ 
ಹೆಣವಿಂದು ನಾರುತಿದೆ ಮನದಂಗಳದಿ ನೋಡಾ 
ಕೊಳೆ ತೊಳೆಯಲೆಂದೇ ಅವತರಿಸಿಹಳು 
ಆಧ್ಯಾತ್ಮ ಗಂಗೆ
ದುಮ್ಮಿಕ್ಕಿ ಜಿಗಿದಿಹಳು ಕಂಗಳ ಕೊಳದಲ್ಲಿ 
ಕುರುಹುವನು ಬಿಡದಂತೆ ರಭಸದಲಿ ಹರಿದಿಹಳು 
ಭ್ರಮೆಯಿಂದ ವಾಸ್ತವಕೆ...ಮುಸುಕಿಂದ ಬೆಳಕಿಗೆ

ಸಲಹಲಾಗದೆ ಬಿಸುಟಿದ್ದೆ ಮೂಲೆಯಲಿ
ರೋಧಿಸುತ್ತಿತ್ತು ಆಗಾಗ ತಬ್ಬಲಿಯಂತೆ
ಎಲ್ಲಿಂದಲೋ ಅವತರಿಸಿ
ಬೇಡವೆಂದರೂ ಎತ್ತಿ ಮುದ್ದಿಸಿದೆ
ಅದಕಷ್ಟೇ ಸಾಕಾಯ್ತು ಚಿಗುರೊಡೆಯಿತು ದಳದಂತೆ
ಇಂದು ನಿನ್ನ ಅವಜ್ಞೆಯಲಿ ಹುಡಿಹುಡಿಯಾಗಿ
ಕಣ್ಣೆದುರೇ ನಡೆದೋಯ್ತು ಭ್ರೂಣ ಹತ್ಯೆ
ಸೂತಕದಿ ಮನ ರೋಧಿಸಿದೆ
ಕನಸುಗಾರ ನೀನಲ್ಲ ಕನಸ ಕೂಸಿನ ಕೊಲೆಗಾರ

2 comments:

  1. ಶೀರ್ಷಿಕೆಯಲ್ಲಿ ಮಡಗಟ್ಟಿರುವ ಅಮಿತ ವ್ಯಥೆಯು ಸಾಲು ಸಾಲುಗಳಲೂ ಕಣ್ಣ ಹನಿಗಳಂತೆ ಒದ್ದೆ ಒದ್ದೆಯಾಗಿದೆ!

    ReplyDelete
  2. ಧನ್ಯವಾದಗಳು...ಅದ್ಯಾಕೋ ಗೊತ್ತಿಲ್ಲ ನನಗೆ ದುಃಖ ದ ಕವನಗಳನ್ನ ಬರೆಯೋಕೆ ಇಷ್ಟ ಆಗುತ್ತೆ...ಯಾಕೆ ಹೀಗೆ ಅಂತಾನೆ ಅರ್ಥ ಆಗ್ತಾ ಇಲ್ಲ ಬದರಿನಾಥ್ ಸರ್....

    ReplyDelete