Friday 12 July 2013


ನಿವೇದನೆ

ನಿನ್ನ ಕಾಣುವ ತವಕಕೆ
ನನ್ನ ಮನ ಮೇಳೈಸಿರಲು
ಕಂಡರೆಲ್ಲಿ ಸೋಲುವೆನೆಂಬ ಭಯ
ನನ್ನ ಹೃದಯವ ಕಾಡಿಹುದು

ಬಿಟ್ಟೋಡಲು ನಾ ದೂರ ದೂರ
ತಿರುಗಿ ನೋಡುವದದು
ಆಸೆಯಲಿ ಹುಚ್ಚು ಮನ
ಆಲಿಸಲು ನಿನ್ನ ಕರೆಯ ಮೊರೆಯ

ಮರೆಯ ಬೇಕೆನ್ನುವದುನಿರ್ಧಾರ
ಆದರಲ್ಲಿಯೂ ನಿನ್ನದೇ ಕಾರುಭಾರ
ಅಂತೂ ಗೆದ್ದೆನೆಂಬ ಸಮಯದಲಿ
ನಗುವದದು ನಿನ್ನ ಮುಖ ನೇತ್ರದಾಳದಲಿ

ಸೋಲೊಪ್ಪದಾ ಮನಕೆ ಗೆಲುವು ಮರಿಚಿಕೆಯಾಗೆ
ಹೊಂದಾಣಿಕೆಯೊಂದೇ ಉಳಿವ ದಾರಿ
ನೀನಲ್ಲೇ ಇರು ನಾನಿಲ್ಲೇ ಇರುವೆ
ಅರಳಿ ನಗುತಿರಲೆಂದು ಶುಭ್ರತೆಯ ಸ್ನೇಹದಾ ಹೂವು

2 comments:

  1. ಹೊಂದಾಣಿಕೆಯೊಂದೇ ಉಳಿವ ದಾರಿ
    ನೀನಲ್ಲೇ ಇರು ನಾನಿಲ್ಲೇ ಇರುವೆ

    ಇದನ್ನೇ ಸಂಸಾರಗಳಿಗೆ ಹೊಂದಿಸಿ ನೋಡಿ:
    "ನಿನ್ನಲ್ಲೇ ಇರುವೆ ನಾನಿನ್ನಲ್ಲೇ ಇರುವೆ"
    http://badari-poems.blogspot.in/

    ReplyDelete
  2. ಧನ್ಯವಾದಗಳು

    ReplyDelete