Wednesday 19 June 2013

ವಿದಾಯ 
ಮರಳಿ ಬಾರದಿರಿ ತಿರುಗಿ ಕಾಡದಿರಿ 
ಹೊರಟುಬಿಡಿ ಮುಖ ತಿರುವಿ 
ಓ ನನಸಾಗದ ಕನಸುಗಳೆ 
ಸ್ಮಶಾನದೆಡೆಗೆ 

ನೀವೆಲ್ಲ ಬಂಧನ ಮುಕ್ತರಿಂದು 
ಕಡಿದಿದೆ ಸಂಕೋಲೆಯಿಂದು 
ಹಾರಿಬಿಡಿ ಸರತಿಯಲಿ 
ಉರಿವ ಚಿತೆಗೆ 

ತಪ್ಪಿಯೂ ಕೂಗದಿರಿ
ರಕ್ಷಿಸಲಾರೆ ನಾ ನಿಮ್ಮ
ನಾನಿಲ್ಲಿ ನಿಶ್ಯಕ್ತ ಹೊರದಾರಿ ಕಾಣದಿಹ
ಚಕ್ರವ್ಯೂಹದ ಬಂಧಿ

ಚಿಗುರಲಾರಿರಿ ನೀವಿಲ್ಲಿ
ಇದು ನೀರೇ ಕಾಣದ ಮರಳುಗಾಡು
ಬದುಕಿಸಲಾರೆ ನಾ ನಿಮ್ಮ
ಹಾಳೂರ ಒಡತಿ ನಾನು

ಇನ್ನೊಂದು ಜನ್ಮವಿದ್ದರೆ ಕರೆವೆ
ಬಂದು ಹೂವಾಗಿ ಅರಳುವಿರಂತೆ
ಕ್ಷಮಿಸಿ ಕೊಂಡೊಯ್ದುಬಿಡಿ ಜೊತೆಯಲ್ಲಿ
ಈ ಕಣ್ಣೀರ ಕಾಣಿಕೆ

2 comments:

  1. ಮಮತಾ ಜೀ -
    ಸತ್ತ ಕನಸುಗಳ ಹೂತರೂ, ಸುಟ್ಟರೂ ಅವು ನೆನಪಿನ ಕೋಶದಲ್ಲಿ ಕಮಟು ವಾಸನೆಯಾಗಿ ಕಾಡುತ್ತವಲ್ಲ...
    ಇನ್ನೊಂದು ಜನ್ಮವಿದ್ದರೆ ಕರೆವೆ
    ಬಂದು ಹೂವಾಗಿ ಅರಳುವಿರಂತೆ
    ಕ್ಷಮಿಸಿ ಕೊಂಡೊಯ್ದುಬಿಡಿ ಜೊತೆಯಲ್ಲಿ
    ಈ ಕಣ್ಣೀರ ಕಾಣಿಕೆ...
    ಯಾಕೋ ತುಂಬಾನೇ ಇಷ್ಟವಾಯಿತು...

    ReplyDelete
  2. ಧನ್ಯವಾದಗಳು...:)

    ReplyDelete