Saturday 25 May 2013

ನಾನು ಮತ್ತು ಪಾರಿಜಾತ
ಇರುಳಲಿ ಅರಳಿ 
ಹಗಲಲಿ ಮುದುಡಿ 
ತೊರೆಯುವೆಯೇಕೆ ಅಮ್ಮನ ಮಡಿಲ 
ಒಂದು ರಾತ್ರಿಯೇ ನಿನಗೆ ಆಯಸ್ಸು 

ಇದ್ದರೇನಂತೆ ದೀರ್ಘಾಯಸ್ಸು 
ನನಸಾಗದೆ, ಉಳಿದರೆ ಕನಸು 
ನನ್ನಿಯನ ಜೊತೆ ರಾತ್ರಿಯ ಕಳೆವೆ 
ಅರಳಿ ಸುಖದಲಿ ನಾ ಸಾರ್ಥಕತೆ ಪಡೆವೆ 

ಚಂದ್ರನ ಕಂಡು ನಗುತೊರುವೆ ನೀ
ಎಲ್ಲೆಲ್ಲಿಯೂ ಹರಡುವೆ ಮರಿಮಳವ
ರವಿಯನು ಕಂಡರೆ ಮುಖ ಬಾಡಿಸುವೆ
ನಿನಗೇತಕೆ ಅವನಲಿ ಮುನಿಸು

ಚಂದ್ರನ ಅಂದ ರವಿಯಲಿ ಇಲ್ಲ
ತಂಪನು ಸುರಿದು ಅವ ರಮಿಸೊಲ್ಲ
ಶಾಖದ ಝಳಕ ನನಗಾಗಲ್ಲ
ಸೋಕ್ಷ್ಮವೇ ತಿಳಿಯದ ಅವನಲಿ ಮನಸಿಲ್ಲ

2 comments:

  1. ಸೂರ್ಯನನ್ನು ಪ್ರೇಮಿಸಿ ಅವನಿಗೆ ಬೆನ್ನುಮಾಡಿ ಹೊರಟಳಂತೆ ಪಾರಿಜಾತ
    ಚೆನ್ನಾಗಿದೆ

    ReplyDelete
  2. ಧನ್ಯವಾದಗಳು ಸ್ವರ್ಣ..:)

    ReplyDelete