ಪಯಣ
ಕಾಣದೂರಿಗೆ ನಮ್ಮ ಪಯಣ
ದಣಿವಾರಿಸಲು ಮಧ್ಯದಲಿದು
ತಂಗುದಾಣ
ಇಲ್ಲಿ ಕೊಟ್ಟು ಕೊಳ್ಳಬೇಕು ಪ್ರೀತಿ
ಕಾಣದೂರಿಗೆ ನಮ್ಮ ಪಯಣ
ದಣಿವಾರಿಸಲು ಮಧ್ಯದಲಿದು
ತಂಗುದಾಣ
ಇಲ್ಲಿ ಕೊಟ್ಟು ಕೊಳ್ಳಬೇಕು ಪ್ರೀತಿ
ಪ್ರೇಮ ಮಮತೆ
ಬದಲು ಕೊಳ್ಳುವೆವು ಕೋಪ
ದ್ವೇಷ ಅಸೂಯೆ
ಕಚ್ಚಾಡುವೆವು ನಮ್ಮದಲ್ಲದ
ವಸ್ತುವಿಗಾಗಿ
ಕೊನೆಗೆ ಹೊತ್ತಯ್ಯಲಾಗದೆ
ಬಿಟ್ಟೋಗಲಾಗದೆ ಅನುಭವಿಸುವೆವು
ತ್ರಿಶಂಕುವಿನ ಪಾಡು
ಕೊಳ್ಳಬೇಕಾದುದನೆ ಕೊಂಡರೆ
ಪಯಣವದು ಸುಖವು
ಕರೆದಾಗ ಹೋಗಲು ನಮಗಿಲ್ಲ ಭಯವು
ಶಾಶ್ವತವಲ್ಲವೀ ತಂಗುದಾಣ
ಸರತಿ ಬಂದಾಗ ಮುಂದುವರಿಸಬೇಕು
ನಮ್ಮ ಪಯಣ
ಬದಲು ಕೊಳ್ಳುವೆವು ಕೋಪ
ದ್ವೇಷ ಅಸೂಯೆ
ಕಚ್ಚಾಡುವೆವು ನಮ್ಮದಲ್ಲದ
ವಸ್ತುವಿಗಾಗಿ
ಕೊನೆಗೆ ಹೊತ್ತಯ್ಯಲಾಗದೆ
ಬಿಟ್ಟೋಗಲಾಗದೆ ಅನುಭವಿಸುವೆವು
ತ್ರಿಶಂಕುವಿನ ಪಾಡು
ಕೊಳ್ಳಬೇಕಾದುದನೆ ಕೊಂಡರೆ
ಪಯಣವದು ಸುಖವು
ಕರೆದಾಗ ಹೋಗಲು ನಮಗಿಲ್ಲ ಭಯವು
ಶಾಶ್ವತವಲ್ಲವೀ ತಂಗುದಾಣ
ಸರತಿ ಬಂದಾಗ ಮುಂದುವರಿಸಬೇಕು
ನಮ್ಮ ಪಯಣ
ಕವನದ ಆಶಯ ತುಂಬಾ ಇಷ್ಟವಾಯಿಯು ಮೇಡಂ. ಪುಟ್ಟ ಬದುಕಿನಲ್ಲಿ ಏಕಿಷ್ಟು ರಾದ್ಧಾಂತಗಳೋ? ಅಲ್ವಾ!!!
ReplyDeleteನನ್ನ ಬ್ಲಾಗಿಗೂ ಸ್ವಾಗತ.
ಧನ್ಯವಾದಗಳು
ReplyDelete