Tuesday 19 June 2012


ಪಯಣ
ಕಾಣದೂರಿಗೆ ನಮ್ಮ ಪಯಣ
ದಣಿವಾರಿಸಲು ಮಧ್ಯದಲಿದು
ತಂಗುದಾಣ
ಇಲ್ಲಿ ಕೊಟ್ಟು ಕೊಳ್ಳಬೇಕು ಪ್ರೀತಿ
ಪ್ರೇಮ ಮಮತೆ
ಬದಲು ಕೊಳ್ಳುವೆವು ಕೋಪ
ದ್ವೇಷ ಅಸೂಯೆ
ಕಚ್ಚಾಡುವೆವು ನಮ್ಮದಲ್ಲದ
ವಸ್ತುವಿಗಾಗಿ
ಕೊನೆಗೆ ಹೊತ್ತಯ್ಯಲಾಗದೆ
ಬಿಟ್ಟೋಗಲಾಗದೆ ಅನುಭವಿಸುವೆವು
ತ್ರಿಶಂಕುವಿನ ಪಾಡು
ಕೊಳ್ಳಬೇಕಾದುದನೆ ಕೊಂಡರೆ
ಪಯಣವದು ಸುಖವು
ಕರೆದಾಗ ಹೋಗಲು ನಮಗಿಲ್ಲ ಭಯವು
ಶಾಶ್ವತವಲ್ಲವೀ ತಂಗುದಾಣ
ಸರತಿ ಬಂದಾಗ ಮುಂದುವರಿಸಬೇಕು
ನಮ್ಮ ಪಯಣ 

2 comments:

  1. ಕವನದ ಆಶಯ ತುಂಬಾ ಇಷ್ಟವಾಯಿಯು ಮೇಡಂ. ಪುಟ್ಟ ಬದುಕಿನಲ್ಲಿ ಏಕಿಷ್ಟು ರಾದ್ಧಾಂತಗಳೋ? ಅಲ್ವಾ!!!

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಧನ್ಯವಾದಗಳು

    ReplyDelete