Tuesday 5 November 2013

ಮುಂಜಾವು..

ರವಿಯು ರಥದಿ ಏರಿ ಬರಲು 
ತೋಟದಲ್ಲ್ಲಿ ಹೂವು ನಗಲು 
ಬೃಂಗ ಗಾನ ಹಾಡುತಿರಲು 
ಕರ್ಣ ಪಾವನ 

ಮಂದ ಪವನ ಬೀಸುತಿರಲು 
ತರು ಲತೆಗಳು ನರ್ತಿಸಿರಲು 
ಸುಗಂಧವದು ಪಸರಿಸಿರಲು 
ಸ್ವರ್ಗ ಸಮಾನ

ರವಿಯ ಸ್ಪರ್ಶಕೆ ಇಳೆಯು ನಗಲು
ನಾಚಿದ ಕಪೋಲದಿ ರಂಗು ಏರಲು
ಭೂ ರಮೆಯು ನವ ವಧುವೇ ಆಗಲು
ಶೃಂಗಾರ ಮನ

2 comments:

  1. ರೈಮಿಂಗಿನ ಜೊತೆಗೆ ಪ್ರತಿ ಸಲುವಿನ
    ತಾನ ತುಂಬಾ ಚನ್ನಾಗಿದೆ...

    ಮುಂಜಾವಿನ ಏಕತಾನತೆಗೆ ಒಂದು ಕನ್ನಡಿಯಂತಿದೆ ಕವನ...
    ತುಂಬಾ ಚನ್ನಾಗಿದೆ...

    ReplyDelete
  2. Thank you ಕನಸು ಕಂಗಳ ಹುಡುಗ

    ReplyDelete