Sunday, 14 July 2013

ಮೇಲು ಕೀಳು

ಮೇಲು ಕೀಳೆಂಬ ಜಾತಿ ನೀತಿ
ಹಣಕ್ಯಾಕಿಲ್ಲ ಜಗದಲ್ಲಿ
ಕೀಳ್ಜಾತಿಯವ ಅಸ್ಪ್ರಶ್ಯನಾದರೆ
ಅವ ಮುಟ್ಟಿದ ಹಣಕ್ಕಿಲ್ಲವೇ ಈ ನೀತಿ

ಕೆಳವರ್ಗದವ ನಿಲ್ಲಬೇಕು
ಹೊಸ್ತಿಲಿಂದ ಹೊರಗೆ
ಅದೇ ಅವ ಕೊಟ್ಟ ಹಣ ಮಾತ್ರ
ಬರಬಹುದೇ ಒಳಗೆ

ಕಿಳ್ಜಾತಿಯ ಒಳ ಬಂದರೆ
ಆಗುವದವಗೆ  ಕಪಾಳ ಮೋಕ್ಷ
ಅವ ತಂದ ಹಣವಾದರೆ
ಅದುವೇ ಲಕ್ಷ್ಮೀ ಕಟಾಕ್ಷ

ಮೇಲ್ಜಾತಿ ಕೀಳ್ಜಾತಿ ಎನ್ನುವಾ
ಬೇದವೇಕೆ ಹುಟ್ಟಿನಲ್ಲಿ 
ಬುದ್ಧಿ
–
ನಡತೆಯಲಿ ಉತ್ತಮನೆ
ಮೇಲ್ಜಾತಿ ಯಲ್ಲವೇ

ಎಲ್ಲರ ಮೈಯಲ್ಲೂ ಹರಿವುದೊಂದೇ
ಕೆಂಪುರಕ್ತ
ಇದನರಿತ ಒಗ್ಗಟ್ಟಿನ ಬಾಳ್ವೆಯೇ
ಜಗದಲ್ಲಿ ಸೂಕ್ತ.

4 comments:

  1. ನಮ್ಮ ಹಳ್ಳಿಗಾಡಲಿ ಅಷ್ಟೇ ಏಕೆ ನಗರಗಳಲ್ಲೂ ಇನ್ನೂ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದೇ ಇದೆ!

    ತಮಾಷೆ ಎಂದರೆ ಕೀಳು ಜಾತಿ ಎನ್ನುವವರು ಅವರೇ ಮಂತ್ರಿಗಳಾದರೇ ಸನ್ಮಾನಿಸುವರು!

    http://badari-poems.blogspot.in

    ReplyDelete
    Replies
    1. ಎಲ್ಲಾ ಹಣ ಮತ್ತು ಅಧಿಕಾರದ ಮಹಿಮೆ

      Delete
  2. ನೀವು ಹೇಳುವುದು 100% ಸತ್ಯ ಇದು ನಿತ್ಯವು ನಡಿತಿದೆ.
    ಇದಕ್ಕೆ ಪರಿಹಾರ ಭೂ ಪ್ರಳಯ ಇಲ್ಲಾ ಸಾದ್ಯವೇ ಇಲ್ಲ.
    www.kannada143musiq.blogspot.com
    and
    www.songs143musiq.blogspot.com

    ReplyDelete
  3. ಧನ್ಯವಾದಗಳು

    ReplyDelete