Friday 21 June 2013

ಒಂಟಿ ನಕ್ಷತ್ರ

ಮೋಡದ ಮರೆಯಲ್ಲಿ ಇಣುಕುತಿದೆ
ಒಂಟಿ ನಕ್ಷತ್ರವೊಂದು 
ತೋರುತಿದೆ ಬಾಗಿಲ ಸೆರೆಯಲಿ
ನಾಚಿನಿಂತ ಹೆಣ್ಣಿನಂತೆ
ಕಾಯುತಿರುವಂತಿದೆ ಇನ್ನೂ ಬಾರದ ಗೆಳೆಯನಿಗೆ
ಹುಸಿಮುನಿಸ ತೋರಿದಂತಿದೆ
ನಗು ಚಲ್ಲುವಾ ಚಂದ್ರಮನಿಗೆ
ಮರೆಯಾಗಿ ಹೋಗಿಹಳು
ಮತ್ತೆ ತಲೆಯೆತ್ತ್ತಿನೋಡೋ ಹೊತ್ತಿಗೆ
ಕಾದು ಬೇಸರವಾಯ್ತೇನೋ ಪ್ರಿಯತಮನಿಗೆ
ಸುತ್ತಲೂ ಆವರಿಸುತಿದೆ 
ಕಾರ್ಮೋಡ ಕಗ್ಗತ್ತಲಿನಂತೆ
ಒಂದೊಂದೇ ಹನಿ ಇಳಿಯತೊಡಗಿತು
ಇವಳ ಕಣ್ಣೀರಿನಂತೆ.

6 comments:

  1. ಸಮೀಕರಿಸಿದ ರೀತಿಗೆ ಜೈಹೋ... ನೂರು ಕಾಲ ನಿಲ್ಲುವ ಕವನವಿದು.
    http://www.badari-poems.blogspot.in/

    ReplyDelete
  2. ಧನ್ಯವಾದಗಳು...ಬದ್ರಿ ಸರ್..

    ReplyDelete
  3. ಕಾದು ಬೇಸರವಾಯ್ತೇನೋ ಪ್ರಿಯತಮನಿಗೆ
    ಸುತ್ತಲೂ ಆವರಿಸುತಿದೆ
    ಕಾರ್ಮೋಡ ಕಗ್ಗತ್ತಲಿನಂತೆ
    ಒಂದೊಂದೇ ಹನಿ ಇಳಿಯತೊಡಗಿತು
    ಇವಳ ಕಣ್ಣೀರಿನಂತೆ.

    ಚಂದನೆಯ ಸಾಲುಗಳು.... ಹೋಲಿಕೆ ಮತ್ತು ತೆರೆದಿಟ್ಟ ರೀತಿ
    ಎರಡೂ ಸೊಗಸಾಗಿದೆ....

    ReplyDelete
  4. ಚಂದಾ ಚಂದ...
    ಭಾವಲಹರಿಯ ಈ ಪರಿ ಇಷ್ಟವಾಯ್ತು ...
    ಬರೀತಾ ಇರಿ

    ReplyDelete