ಒಂಟಿ ನಕ್ಷತ್ರ
ಮೋಡದ ಮರೆಯಲ್ಲಿ ಇಣುಕುತಿದೆ
ಒಂಟಿ ನಕ್ಷತ್ರವೊಂದು
ತೋರುತಿದೆ ಬಾಗಿಲ ಸೆರೆಯಲಿ
ನಾಚಿನಿಂತ ಹೆಣ್ಣಿನಂತೆ
ಕಾಯುತಿರುವಂತಿದೆ ಇನ್ನೂ
ಬಾರದ ಗೆಳೆಯನಿಗೆ
ಹುಸಿಮುನಿಸ ತೋರಿದಂತಿದೆ
ನಗು ಚಲ್ಲುವಾ ಚಂದ್ರಮನಿಗೆ
ಮರೆಯಾಗಿ ಹೋಗಿಹಳುಹುಸಿಮುನಿಸ ತೋರಿದಂತಿದೆ
ನಗು ಚಲ್ಲುವಾ ಚಂದ್ರಮನಿಗೆ
ಮತ್ತೆ ತಲೆಯೆತ್ತ್ತಿನೋಡೋ ಹೊತ್ತಿಗೆ
ಕಾದು ಬೇಸರವಾಯ್ತೇನೋ ಪ್ರಿಯತಮನಿಗೆ
ಸುತ್ತಲೂ ಆವರಿಸುತಿದೆ
ಕಾರ್ಮೋಡ ಕಗ್ಗತ್ತಲಿನಂತೆ
ಒಂದೊಂದೇ ಹನಿ ಇಳಿಯತೊಡಗಿತು
ಇವಳ ಕಣ್ಣೀರಿನಂತೆ.
ಸಮೀಕರಿಸಿದ ರೀತಿಗೆ ಜೈಹೋ... ನೂರು ಕಾಲ ನಿಲ್ಲುವ ಕವನವಿದು.
ReplyDeletehttp://www.badari-poems.blogspot.in/
ಧನ್ಯವಾದಗಳು...ಬದ್ರಿ ಸರ್..
ReplyDeleteಕಾದು ಬೇಸರವಾಯ್ತೇನೋ ಪ್ರಿಯತಮನಿಗೆ
ReplyDeleteಸುತ್ತಲೂ ಆವರಿಸುತಿದೆ
ಕಾರ್ಮೋಡ ಕಗ್ಗತ್ತಲಿನಂತೆ
ಒಂದೊಂದೇ ಹನಿ ಇಳಿಯತೊಡಗಿತು
ಇವಳ ಕಣ್ಣೀರಿನಂತೆ.
ಚಂದನೆಯ ಸಾಲುಗಳು.... ಹೋಲಿಕೆ ಮತ್ತು ತೆರೆದಿಟ್ಟ ರೀತಿ
ಎರಡೂ ಸೊಗಸಾಗಿದೆ....
thank u :)
Deleteಚಂದಾ ಚಂದ...
ReplyDeleteಭಾವಲಹರಿಯ ಈ ಪರಿ ಇಷ್ಟವಾಯ್ತು ...
ಬರೀತಾ ಇರಿ
thank u :)
ReplyDelete